ಪಶ್ಚಿಮಘಟ್ಟದಲ್ಲಿ ಎರಡು ಹೊಸ ಸಸ್ಯ ಪ್ರಬೇಧ ಪತ್ತೆ: ಯಾವ ಸಸ್ಯಗಳು ನೋಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮಘಟ್ಟದಲ್ಲಿ ಎರಡು ಹೊಸ ಸಸ್ಯ ಪ್ರಬೇಧಗಳು ವರದಿಯಾಗಿವೆ. ಇದು ಎಲ್ಲಿ, ಯಾವ ಸಸ್ಯಗಳು ಎಂಬುದನ್ನು ತಿಳಿಯಬೇಕಾ? ಹಾಗಾದರೆ ಈ ವರದಿಯನ್ನು ಓದಿ…

ಕೇರಳದ ತಿರುವನಂತಪುರಂ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಜೀವವೈವಿಧ್ಯ-ಸಮೃದ್ಧ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಈ ಹೊಸ ಸಸ್ಯ ಪ್ರಬೇಧ ಕಂಡುಬಂದಿದೆ. ಈ ತಳಿಗಳಿಗೆ ‘ಫಿಂಬ್ರಿಸ್ಟೈಲಿಸ್ ಸುನಿಲಿ’ ಮತ್ತು ‘ನಿಯಾನೋಟಿಸ್ ಪ್ರಭುಯಿ’ ಎಂದು ನಾಮಕರಣ ಮಾಡಲಾಗಿದೆ.

ಮಾಲಿಯಂಕರದ ಎಸ್‌ಎನ್‌ಎಂ ಕಾಲೇಜು, ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ ಮತ್ತು ಪಯ್ಯನೂರ್ ಕಾಲೇಜಿನ ಸಂಶೋಧಕರು ಇವುಗಳನ್ನು ಸಂಶೋಧನೆ ಮಾಡಿದ್ದಾರೆ. ಸಂಶೋಧನಾ ತಂಡಗಳ ಈ ಸಂಶೋಧನೆಗಳನ್ನು ಸಸ್ಯ ವರ್ಗೀಕರಣ ಜರ್ನಲ್ ಫೈಟೊಟಾಕ್ಸಾದಲ್ಲಿ ಪ್ರಕಟಿಸಲಾಗಿದೆ.

ಎಸ್‌ಎನ್‌ಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಮತ್ತು ಸಸ್ಯಶಾಸ್ತ್ರದ ಸಂಶೋಧನಾ ಮಾರ್ಗದರ್ಶಿ ಹಾಗೂ ಸಸ್ಯ ವರ್ಗೀಕರಣಶಾಸ್ತ್ರಜ್ಞ ಸಿ.ಎನ್. ಸುನೀಲ್ ಅವರು ತಿರುವನಂತಪುರಂನ ಪೊನ್ಮುಡಿ ಬೆಟ್ಟಗಳ ಹುಲ್ಲುಗಾವಲುಗಳಿಂದ ಫಿಂಬ್ರಿಸ್ಟೈಲಿಸ್ ಸುನಿಲಿ ಸಸ್ಯವನ್ನು ಸಂಗ್ರಹಿಸಿದ್ದಾರೆ.

ಡೇಟಾ ಕೊರತೆ ನಿರ್ಣಯ

ಎಸ್‌ಎನ್‌ಎಂ ಕಾಲೇಜಿನ ಸಸ್ಯಶಾಸ್ತ್ರ ಸಂಶೋಧನಾ ವಿಭಾಗದ ಎಂ.ಜಿ. ಸನಿಲ್‌ಕುಮಾರ್., ಇ.ಸಿ.ಬೈಜು, ನಿತ್ಯಾ ಮದನನ್ ಮತ್ತು ದಿವ್ಯಾ ಪಿ.ವಿ. ಅವರ ಪ್ರಕಾರ, ಫಿಂಬ್ರಿಸ್ಟೈಲಿಸ್ ಸುನಿಲಿ ಸೈಪರೇಸಿ ಕುಟುಂಬದ ದೀರ್ಘಕಾಲಿಕ ಸಸ್ಯ. ಇದು 20- 59 ಸೆಂ.ಮೀ. ಎತ್ತರವಿದೆ. ಇದು ಬೆಟ್ಟದ 1,100 ಮೀಟರ್ ಎತ್ತರದಿಂದ ಸಂಗ್ರಹಿಸಲಾಗಿದೆ. ಇದನ್ನು ತಾತ್ಕಾಲಿಕವಾಗಿ ಐಯುಸಿಎನ್ ಕೆಂಪುಪಟ್ಟಿ ವಿಭಾಗಗಳ ಅಡಿಯಲ್ಲಿ ಡೇಟಾ ಕೊರತೆ (ಡೇಟಾ ಡೆಫಿಶಿಯೆಂಟ್) ಎಂದು ನಿರ್ಣಯಿಸಲಾಗಿದೆ.

ನಿಯಾನೋಟಿಸ್ ಪ್ರಭುಯಿ ಮೂಲಿಕೆ ಗಿಡವಾಗಿದೆ. ಇದನ್ನು ಲಕ್ನೋದ ಸಿಎಸ್‌ಐಆರ್‌ಎನ್‌ಬಿಆರ್‌ಐ ಹಿರಿಯ ವಿಜ್ಞಾನಿ ಕೆ.ಎಂ. ಪ್ರಭುಕುಮಾರ್ ಅವರು ಪಶ್ಚಿಮ ಘಟ್ಟಗಳ ಹೂವಿನ ಸಸ್ಯಗಳ ಕುರಿತು ಸಂಶೋಧನೆ ನಡೆಸುವಾಗ ವಯನಾಡ್‌ನ ಚೆಂಬ್ರಾ ಪೀಕ್ ಹುಲ್ಲುಗಾವಲುಗಳಲ್ಲಿ ಪತ್ತೆ ಮಾಡಿದ್ದಾರೆ. ಇದು ರೂಬಿಯೇಸಿ ಕುಟುಂಬದಿಂದ ಬಂದಿದೆ ಮತ್ತು ಎತ್ತರದ ಹುಲ್ಲುಗಾವಲುಗಳಲ್ಲಿ ಬೆಳೆಯುತ್ತದೆ.

ನಿಯಾನೋಟಿಸ್ ಪ್ರಭುಯಿ 70 ಸೆಂ.ಮೀ. ಉದ್ದದವರೆಗೆ ಬೆಳೆಯುತ್ತದೆ. ಗಿಡಗಳು ತಿಳಿ ಗುಲಾಬಿ ಬಣ್ಣದೊಂದಿಗೆ ಅನೇಕ ಹೂವುಗಳನ್ನು ಹೊಂದಿರುತ್ತವೆ ಎಂದು ಸಂಶೋಧಕ ತಂಡದಲ್ಲಿದ್ದ ಎಂ.ಜಿ. ಸನಿಲ್‌ಕುಮಾರ್, ಸುನೀಲ್, ಎಸ್‌ಎನ್‌ಎಂ ಕಾಲೇಜಿನ ಸಸ್ಯಶಾಸ್ತ್ರ ಸಂಶೋಧನಾ ವಿಭಾಗದ ನಿತ್ಯಾ ಮದನನ್, ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್‌ನಿಂದ ಅನಿಲ್‌ಕುಮಾರ್ ಮತ್ತು ಸಲೀಂ ಪಿಚ್ಚನ್ ಹಾಗೂ ಪಯ್ಯನೂರು ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ರತೀಶ್ ನಾರಾಯಣನ್ ವಿವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!