ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಕಿ, ರಾಗಿ, ಬೇಲೆ ಕಾಳುಗಳು ಸೇರಿದಂತೆ ಎಲ್ಲಾ ಧವಸ-ಧಾನ್ಯಗಳಲ್ಲಿ ಮೆಣಸಿನ ಕಾಯಿ ಹಾಗೂ ಉಪ್ಪು ಹಾಕುವುದು ಕಾಮನ್.. ಯಾಕೆ ಗೊತ್ತಾ..? ಬಹಳ ದಿನಗಳಿಂದ ಶೇಖರಿಸಿಟ್ಟ ಧಾನ್ಯಗಳಲ್ಲಿ ಹುಳಗಳು ಮನೆ ಮಾಡಿಕೊಳ್ಳುತ್ತವೆ. ಮೊಟ್ಡೆಯಿಟ್ಟು, ಮರಿ ಮಾಡಿ ಆಹಾ ಪದಾರ್ಥಗಳನ್ನು ಹಾಳು ಮಾಡುತ್ತವೆ.
ಮೆಣಸಿನಕಾಯಿ ಹಾಗೂ ಉಪ್ಪು ಬಳಸುವುದರಿಂದ ಅವುಗಳ ಘಾಟು ಅತೀ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮೆಣಸಿನಕಾಯಿಯ ಘಾಟು ಧಾನ್ಯಗಳಲ್ಲಿ ಹುಳ ಆಗದಂತೆ ನೋಡಿಕೊಳ್ಳುತ್ತದೆ. ಕಲ್ಲುಪ್ಪಿನಲ್ಲಿ ಸೋಡಿಯಂ ಕ್ಲೋರೈಡ್ ಅಂಶ ಹೆಚ್ಚಾಗಿ ಇರುತ್ತದೆ. ಇದು ಆಹಾರ ಪದಾರ್ಥಗಳು ಕೆಡದಂತೆ ಹಾಗೂ ಹುಳ ಆಗದಂತೆ ತಡೆಯುತ್ತದೆ.