ಭಯೋತ್ಪಾದನೆ ನಿಗ್ರಹಕ್ಕೆ ಚೀನಾ ಅಡ್ಡಗಾಲು: ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಮತ್ತೊಮ್ಮೆ ಹಿನ್ನಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಯತ್ನಕ್ಕೆ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ನಾಯಕ ಶಾಹಿದ್ ಮಹಮೂದ್ ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಅಮೆರಿಕದ ಜತೆಗೆ ಭಾರತ ಪ್ರಸ್ತಾವನೆಗೆ ತಡೆ ಒಡ್ಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇಂತಹ ಪ್ರಸ್ತಾಪಗಳನ್ನು ಚೀನಾ ಪದೇ ಪದೇ ತಡೆಹಿಡಿಯುತ್ತಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ‘1267 ಅಲ್ ಖೈದಾ ನಿರ್ಬಂಧ ಸಮಿತಿ’ಯನ್ನು ಗುರುತಿಸದಂತೆ ಚೀನಾ ತಡೆದಿದೆ. ಕಳೆದ ಆರು ತಿಂಗಳಲ್ಲಿ ಅಡ್ಡಗಾಲು ಹಾಕಿರುವುದರಲ್ಲಿ ಇದು ನಾಲ್ಕನೇ ಬಾರಿಗೆ. ಡಿಸೆಂಬರ್ 2016 ರಲ್ಲಿ, ಯುನೈಟೆಡ್ ಸ್ಟೇಟ್ಸ್ ಶಾಹಿದ್ ಮಹಮೂದ್ ಅನ್ನು ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಗುರುತಿಸಿತು. ವಿಶ್ವಸಂಸ್ಥೆಯಲ್ಲಿ ಚೀನಾ ಭಾರತದ ವಿರುದ್ಧ ಹಾಗೂ ಪಾಕಿಸ್ತಾನದ ಪರವಾಗಿ ವರ್ತಿಸುತ್ತಿದೆ. ಈ ಹಿಂದೆ ಭಾರತ ಮಾಡಿದ ಹಲವು ಪ್ರಸ್ತಾವನೆಗಳಿಗೆ ಚೀನಾ ತಡೆ ನೀಡಿದೆ.

ಭಾರತದ ವಿರುದ್ಧ ಸಂಚು ರೂಪಿಸುತ್ತಿರುವ ಪಾಕಿಸ್ತಾನಕ್ಕೆ ಚೀನಾ ನೆರವು ನೀಡುತ್ತಿರುವುದಕ್ಕೆ ಭಾರತ ಈಗಾಗಲೇ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದೆ. ಆದರೂ ಚೀನಾ ಪಾಕ್‌ ಪರ ತನ್ನ ನಿಲುವನ್ನು ಬಹಿರಂಗಪಡಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!