ಬಿಹಾರದ 7ನೇ ತರಗತಿ ಪ್ರಶ್ನೆ ಪತ್ರಿಕೆಯಲ್ಲಿ ʼಕಾಶ್ಮೀರ ಪ್ರತ್ಯೇಕ ದೇಶʼವೆಂದು ಉಲ್ಲೇಖ: ಬಿಜೆಪಿ ಕಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಿಹಾರದ ಶಾಲೆಯೊಂದರ ಪ್ರಶ್ನೆ ಪತ್ರಿಕೆಯಲ್ಲಿ ʼಕಾಶ್ಮೀರ ಭಾರತದ ಭಾಗವಲ್ಲ, ಪ್ರತ್ಯೇಕ ದೇಶʼ ಎಂದು ಉಲ್ಲೇಖಿಸಲಾಗಿದ್ದು ಭಾರೀ ವಿವಾದ ಸೃಷ್ಟಿಸಿದೆ.
ರಾಜ್ಯದ ಕಿಶನ್‌ಗಂಜ್ ಜಿಲ್ಲೆಯಲ್ಲಿ 7 ನೇ ತರಗತಿ ಪ್ರಶ್ನೆಪತ್ರಿಕೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕ ದೇಶ ಎನ್ನಲಾಗಿದೆ. ಈ ಫ್ರನೆ ಪತ್ರಿಕೆ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಬಿಜೆಪಿ ಬಿಹಾರ ಸಿಎಂ ನಿತೇಶ್‌ ರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. 7ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡಲಾದ ಪ್ರಶ್ನೆ ಪತ್ರಿಕೆಯಲ್ಲಿ ಈ ದೇಶಗಳ ಜನರನ್ನು ಏನೆಂದು ಕರೆಯುತ್ತಾರೆ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದರಲ್ಲಿ ಚೀನಾ, ನೇಪಾಳ, ಇಂಗ್ಲೆಂಡ್ ಮತ್ತು ಭಾರತದ ಜೊತೆಗೆ ದೇಶ ಎಂಬಲ್ಲಿ ಕಾಶ್ಮೀರದ ಆಯ್ಕೆಯೂ ಇದೆ. ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿಯ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್, ಬಿಹಾರ ಸರ್ಕಾರವು ಕಾಶ್ಮೀರವನ್ನು ಭಾರತದ ಅವಿಭಾಜ್ಯ ಭಾಗವೆಂದು ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
“ನೇಪಾಳ, ಇಂಗ್ಲೆಂಡ್, ಚೀನಾ ಮತ್ತು ಭಾರತದಂತೆ ಕಾಶ್ಮೀರ ಕೂಡ ಪ್ರತ್ಯೇಕ ದೇಶ ಎಂದು ಬಿಹಾರ ಸರ್ಕಾರದ ಅಧಿಕಾರಿಗಳು ನಂಬುತ್ತಾರೆ ಎಂಬುದನ್ನು ಈ ಪ್ರಶ್ನೆಯು ಸೂಚಿಸಿ ಹೇಳುತ್ತದೆ” ಎಂದು ಜೈಸಾಲ್ ಕಿಡಿಕಾರಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಲೆಯ ಅಧಿಕಾರಿಗಳು, ಅದನ್ನು ‘ತಾಂತ್ರಿಕ ದೋಷ’ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!