ಒಂದೇ ತಿಂಗಳಲ್ಲಿ ಭಾರತದ 26 ಲಕ್ಷ ವಾಟ್ಸಾಪ್ ಖಾತೆ ಬ್ಯಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಒಂದೇ ತಿಂಗಳಲ್ಲಿ ಭಾರತದ 26 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದೆ.

ವಾಟ್ಸಾಪ್ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ 26 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ. ಕಳೆದ ತಿಂಗಳು 66 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ವಾಟ್ಸಾಪ್ ಹೇಳಿದೆ.

ಬ್ಯಾನ್ ಆದ ಖಾತೆಗಳಲ್ಲಿ ಶೇ. 95ರಷ್ಟು ಖಾತೆಗಳು ಸ್ಪ್ಯಾಮ್ ಸಂದೇಶಗಳನ್ನು ರವಾನಿಸುತ್ತಿದ್ದವು. ಆಗಸ್ಟ್‌ನಲ್ಲಿಯೂ ಇದೇ ರೀತಿ 23 ಲಕ್ಷಕ್ಕೂ ಅಧಿಕ ಖಾತೆಗಳನ್ನು ನಿಷೇಧಿಸಲಾಗಿತ್ತು. ಮಾಹಿತಿ ತಂತ್ರಜ್ಞಾನ ನಿಯಮಗಳ ಅನುಸಾರ ಕಂಪನಿ ಈ ಕ್ರಮ ಕೈಗೊಳ್ಳುತ್ತಿದೆ.

ನೂತನ ಐಟಿ ನಿಯಮದ ಅನ್ವಯ ದೊಡ್ಡ ಪ್ಲಾಟ್‌ಫಾರ್ಮ್‌ಗಳು ಪ್ರತಿ ತಿಂಗಳು ವರದಿ ನೀಡಬೇಕು. ಈ ವರದಿಯಲ್ಲಿ ದೂರುಗಳು, ಅದನ್ನು ಬಗೆಹರಿಸಿರುವ ಬಗ್ಗೆ ಮಾಹಿತಿ ನೀಡಬೇಕು ಎಂದು ವಾಟ್ಸಾಪ್ ಹೇಳಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!