ತೈವಾನ್‌ ವಾಯುಪ್ರದೇಶದಲ್ಲಿ ಚೀನಾ ಪುಂಡಾಟ: 18 ಪರಮಾಣು ಸಾಮರ್ಥ್ಯದ ಬಾಂಬರ್‌ಗಳ ಹಾರಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದೊಂದಿಗೆ ಗಡಿಯಲ್ಲಿ ಮತ್ತೊಮ್ಮೆ ಸಂಘರ್ಷಕ್ಕಿಳಿದಿರುವ ಚೀನಾ ಮತ್ತೊಂದೆಡೆ ತೈವಾನ್‌ ಗಡಿಯಲ್ಲಿಯೂ ಪುಂಡಾಟಿಕೆ ಮಾಡಿದೆ. ತೈವಾನ್‌ ವಾಯು ಪ್ರದೇಶದಲ್ಲಿ ಚೀನಾದ 21 ವಿಮಾನಗಳು ಹಾರಾಟ ನಡೆಸಿದ್ದು ಅವುಗಳಲ್ಲಿ 18 ಪರಮಾಣು ಸಾಮರ್ಥ್ಯವುಳ್ಳ ಬಾಂಬರ್‌ ಗಳಾಗಿವೆ ಎಂದು ತೈವಾನ್‌ ಕಳವಳ ವ್ಯಕ್ತಪಡಿಸಿದೆ.

ತೈವಾನ್‌ ನಿಂದ ಆಮದುಗಳನ್ನು ಚೀನಾ ಇತ್ತೀಚೆಗಷ್ಟೇ ನಿಷೇಧಿಸಿತ್ತು. ಇದೀಗ ತೈವಾನ್‌ ನೊಂದಿಗಡ ಗಡಿಯಲ್ಲಿಯೂ ಕ್ಯಾತೆ ತೆಗೆದಿದೆ ಚೀನಾ. ಮೊದಲಿನಿಂದಲೂ ಚೀನಾ ತೈವಾನ್‌ ಅನ್ನು ತನ್ನ ಪ್ರದೇಶವೆಂದು ಹೇಳಿಕೊಳ್ಳುತ್ತಾ ಬಂದಿದೆ. ಆದರೆ ಅಮೆರಿಕದ ಭೇಟಿಯ ನಂತರ ಈ ತಿಕ್ಕಾಟ ಇನ್ನಷ್ಟು ಉಗ್ರರೂಪ ತಾಳಿದ್ದು ತೈವಾನ್‌ ಗಡಿಯಲ್ಲಿ ಚೀನಾ ಒಂದಿಲ್ಲೊಂದು ಪುಂಡಾಟಿಕೆ ನಡೆಸಿದೆ. ಇದೀಗ ಪರಮಾಣು ಸಾಮರ್ಥ್ಯದ ಬಾಂಬರ್‌ ಗಳನ್ನು ಕಳುಹಿಸಿಕೊಟ್ಟಿರುವುದು ತೈವಾನ್‌ ಗೆ ಕಳವಳವುಂಟುಮಾಡಿದೆ.

ತೈವಾನ್ ಚೀನಾದ ನಿರಂತರ ಆಕ್ರಮಣದ ಬೆದರಿಕೆಯ ಅಡಿಯಲ್ಲಿ ವಾಸಿಸುತ್ತಿದೆ, ಸ್ವಯಂ-ಆಡಳಿತ ಹೊಂದಿರುವ ತೈವಾನ್‌ ಅನ್ನು ಚೀನಾ ವಶಪಡಿಸಿಕೊಳ್ಳಲು ಹಪಹಪಿಸುತ್ತಿದೆ. 2016 ರ ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್ ಅವರ ಚುನಾವಣೆಯ ನಂತರ ಬೀಜಿಂಗ್ ಮಿಲಿಟರಿ, ರಾಜತಾಂತ್ರಿಕ ಮತ್ತು ಆರ್ಥಿಕ ಒತ್ತಡವನ್ನು ಹೆಚ್ಚಿಸಿದೆ,

ಮಂಗಳವಾರ ಬೆಳಗ್ಗೆ ದೈನಂದಿನ ಅಪ್‌ಡೇಟ್‌ನಲ್ಲಿ ತೈವಾನ್‌ನ ರಕ್ಷಣಾ ಸಚಿವಾಲಯವು ಕಳೆದ 24 ಗಂಟೆಗಳಲ್ಲಿ 18 ಪರಮಾಣು ಸಾಮರ್ಥ್ಯದ H-6 ಬಾಂಬರ್‌ಗಳನ್ನು ಒಳಗೊಂಡಂತೆ 21 ವಿಮಾನಗಳು ದ್ವೀಪದ ನೈಋತ್ಯ ವಾಯು ರಕ್ಷಣಾ ಗುರುತಿನ ವಲಯವನ್ನು (ADIZ) ಪ್ರವೇಶಿಸಿವೆ ಎಂದು ಹೇಳಿದೆ. ಚೀನಾ ಕಳೆದ ವಾರ ತೈವಾನೀಸ್ ಆಹಾರ, ಪಾನೀಯಗಳು, ಆಲ್ಕೋಹಾಲ್ ಮತ್ತು ಮೀನುಗಾರಿಕೆ ಉತ್ಪನ್ನಗಳ ಮೇಲೆ ಹೊಸ ಆಮದು ನಿಷೇಧಗಳನ್ನು ವಿಧಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಚೀನಾ ಒಂದೇ ದಿನದಲ್ಲಿ ಐದಕ್ಕಿಂತ ಹೆಚ್ಚು H-6 ಬಾಂಬರ್‌ಗಳನ್ನು ಕಳುಹಿಸುವುದು ಅಪರೂಪ ಆದರೆ ತೈವಾನ್‌ ವಿಷಯದಲ್ಲಿ ನಾಟಕೀಯವಾಗಿ 18 ಬಾಂಬರ್‌ ಕಳಿಸಿರುವುದು ತೈವಾನ್-ಚೀನಾ ನಡುವಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!