ಚೀನಾಗೆ ಮತ್ತೊಂದು ಕಂಟಕ: ಬ್ಯಾಕ್ ಟು ಬ್ಯಾಕ್ ಸೈಕ್ಲೋನ್ ಅಟ್ಯಾಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಕೊರೊನಾ ಸಂಪೂರ್ಣವಾಗಿ ಕೊನೆಯಾಗದ ಬೆನ್ನಲ್ಲೇ ಚೀನಾಗೆ ಮತ್ತೊಂದು ಮುಪ್ಪು ಆವರಿಸಲಿದೆ. ಆಗಸ್ಟ್ ತಿಂಗಳಲ್ಲಿ ಹಲವು ಚಂಡಮಾರುತಗಳು ಚೀನಾವನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ದೇಶದ ಹವಾಮಾನ ಇಲಾಖೆಯ ಅಧಿಕಾರಿಗಳು ಮುನ್ಸೂಚನೆ ಕೊಟ್ಟಿದ್ದಾರೆ.

ಚೀನಾದ ಬೀಜಿಂಗ್‌ ಈಗಾಗಲೇ ಭಾರೀ ಮಳೆ, ಪ್ರವಾಹಕ್ಕೆ ತತ್ತರಿಸಿದ್ದು, ಆಗಸ್ಟ್‌ನಲ್ಲಿ ಎರಡು ಅಥವಾ ಮೂರು ಚಂಡಮಾರುತಗಳು ದೇಶದ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆಯಿದೆ. ಚಂಡಮಾರುತದ ಎಫೆಕ್ಟ್‌ನಿಂದಾಗಿ ದಕ್ಷಿಣ ಚೀನಾದ ಹಲವಾರು ಭಾಗಗಳು ಅಪಾಯದ ಅಂಚಿನಲ್ಲಿವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಈಗಾಗಲೇ ಡೋಕ್ಸುರಿ ಚಂಡಮಾರುತ ಬೀಜಿಂಗ್ ಮತ್ತು ಹೆಬೈ ಪ್ರಾಂತ್ಯದಲ್ಲಿ ಪ್ರವಾಹಕ್ಕೆ ಕಾರಣವಾಗಿದೆ.

ಭಾರೀ ಮಳೆ, ಪ್ರವಾಹ ಇನ್ನಿತರ ಅವಘಡಗಳಿಂದ ಈಗಾಗಲೇ ಕರ್ತವ್ಯದಲ್ಲಿದ್ದ 11 ಅಧಿಕಾರಿಗಳು, 13 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಕಣ್ಮರೆಯಾಗಿದ್ದಾರೆ.

ಯಾಂಗ್ಟ್ಜಿ ನದಿಯ, ಪೊಯಾಂಗ್ ಸರೋವರ, ಸಾಂಗುವಾ ನದಿಯು ಎಚ್ಚರಿಕೆಯ ಮಟ್ಟವನ್ನು ಮೀರಿ ಹರಿಯುವ ಸಾಧ್ಯತೆಯಿದೆ.

ಮುಂಬರುವ ಚಂಡಮಾರುತಗಳಿಂದಾಗಿ ಹುವೈಹೆ, ತೈಹು ಸರೋವರ, ಝುಜಿಯಾಂಗ್ ನದಿ ಮತ್ತು ಹೈನಾನ್ ದ್ವೀಪದಲ್ಲಿರುವ ನದಿಗಳು ಉಕ್ಕಿ ಹರಿಯಬಹುದು. ದೇಶದಾದ್ಯಂತ ಹವಾಮಾನ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!