ಬೇಹುಗಾರಿಕಾ ಹಡಗು ಯುವಾನ್ ವಾಂಗ್ 5, ಮೂಲಕ ಜಲಾಂತರಗಾಮಿ ಕಾರ್ಯಾಚರಣೆಗೆ ಹಿಂದೂ ಮಹಾಸಾಗರದ ನಕ್ಷೆ ತಯಾರಿಸುತ್ತಿದೆಯಾ ಚೀನಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬ್ಯಾಲಿಸ್ಟಿಕ್ ಕ್ಷಿಪಣಿ, ಉಪಗ್ರಹ ಟ್ರ್ಯಾಕಿಂಗ್ ಮತ್ತು ಸಮುದ್ರದ ತಳದ ಮ್ಯಾಪಿಂಗ್ ಸಾಮರ್ಥ್ಯವುಳ್ಳ ಚೀನಾದ ಹಡಗು ಯುವಾನ್ ವಾಂಗ್ 5 ಡಿಸೆಂಬರ್ 5 ರಂದು ಹಿಂದೂ ಮಹಾಸಾಗರ ಪ್ರದೇಶವನ್ನು ಪ್ರವೇಶಿಸಿತ್ತು. ಚೀನಾ ಈ ಹಡಗನ್ನು ಭಾರತದ ವಿರುದ್ಧ ಬೇಹುಗಾರಿಕೆಗೆ ಬಳಸಿಕೊಳ್ಳುತ್ತಿದೆಯಾ ಎಂಬ ಕುರಿತು ಸಂಶಯಗಳು ವ್ಯಕ್ತವಾಗಿದ್ದವು.

ಇದೀಗ ಹೊಸ ಸಂಶಯಗಳು ಹುಟ್ಟಿಕೊಂಡಿದ್ದು ಜಲಾಂತರ್ಗಾಮಿ ಕಾರ್ಯಾಚರಣೆಗೆ ಚೀನಾ ಈ ಹಡಗಿನ ಮೂಲಕ ಹಿಂದೂ ಮಹಾಸಾಗರದ ನಕ್ಷೆ ತಯಾರಿಸುತ್ತಿದೆ ಎಂದು ವರದಿಗಳಾಗಿವೆ.
ಡಿಸೆಂಬರ್ 5 ರಂದು ಹಿಂದೂ ಮಹಾಸಾಗರ ಪ್ರದೇಶವನ್ನು ಪ್ರವೇಶಿಸಿದ ಯುವಾನ್ ವಾಂಗ್ 5 ಚೀನಾದ ಬಾಹ್ಯಾಕಾಶ ಚಟುವಟಿಕೆಯನ್ನು ಪತ್ತೆಹಚ್ಚುವ ಕಾರ್ಯಾಚರಣೆಯ ನೆಪದಲ್ಲಿ ಡಿಸೆಂಬರ್ 12 ರಂದು ಆಸ್ಟ್ರೇಲಿಯಾದ ವಾಯುವ್ಯದಲ್ಲಿರುವ ಸಾಹುಲ್ ತೀರಗಳ ಮೂಲಕ ನಿರ್ಗಮಿಸಿತು. ಯುವಾನ್ ವಾಂಗ್ 5 ಅಲ್ಲಿಂದ ಹೈನಾನ್ ದ್ವೀಪದ ಸಾನ್ಯಾ ಬಂದರಿನತ್ತ ಸಾಗಿದೆ. ಇದು ಚೀನಾದ ಪರಮಾಣು ಜಲಾಂತರ್ಗಾಮಿ ನೆಲೆ ಎಂಬುದು ಗಮನಾರ್ಹ. ಯುವಾನ್ ವಾಂಗ್ ಹಡಗಿನ ಈ ಕಾರ್ಯತಂತ್ರವು ಹಿಂದೂ ಮಹಾಸಾಗರದಲ್ಲಿ ಭವಿಷ್ಯದ ಜಲಾಂತರ್ಗಾಮಿ ಕಾರ್ಯಾಚರಣೆಗಳಿಗಾಗಿ ಚೀನಾವು ಸುಂದಾ ಮತ್ತು ಲೊಂಬೋಕ್ ಜಲಸಂಧಿಗಳನ್ನು ಮ್ಯಾಪಿಂಗ್‌ ಮಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ.
ಕಳೆದ ತಿಂಗಳು, ಯುವಾನ್ ವಾಂಗ್ 6 ಎಂಬ ಇನ್ನೊಂದು ಹಡಗು ಲೊಂಬೋಕ್ ಜಲಸಂಧಿಯ ಸುತ್ತಲೂ ಸಮೀಕ್ಷೆ ನಡೆಸುತ್ತಿತ್ತು ಮತ್ತು 5000 ಕಿಮೀ ಉದ್ದದ 90ಪೂರ್ವ ರಿಡ್ಜ್‌ಗೆ ಇಳಿದು ಅಲ್ಲಿಂದ ಬಂಗಾಳ ಕೊಲ್ಲಿಯಿಂದ ಆಗ್ನೇಯ ದಿಕ್ಕಿನಲ್ಲಿ ಚಲಿಸಿ ಹಿಂದೂ ಮಹಾಸಾಗರದ ಮೂಲಕ ಶಾಂಘೈ ಬಂದರು ತಲುಪಿತು ಎನ್ನಲಾಗಿದೆ. ಇದರ ಸೋದರಿ ಹಡಗಾದ ಯುವಾನ್ ವಾಂಗ್ 5 ಆಗಸ್ಟ್‌ನಲ್ಲಿ ಶ್ರೀಲಂಕಾದ ಹಂಬಂಟೋಟಾ ಬಂದರನ್ನು ಗುತ್ತಿಗೆಗೆ ತೆಗೆದುಕೊಂಡಿತು ಮತ್ತು ಶಾಂಘೈ ಬಂದರಿಗೆ ಹಿಂದಿರುಗುವ ಮೊದಲು ಅದೇ ಪರ್ವತವನ್ನು ನಿರೀಕ್ಷಿಸಿ ವಾಪಸ್ಸಾಗಿದೆ ಎನ್ನಲಾಗಿದೆ.

ಆಸ್ಟ್ರೇಲಿಯಾದ ಬಳಿಯಿರುವ ಸುಂದಾ, ಲೊಂಬೋಕ್ ಮತ್ತು ಒಂಬಿ-ವೆಟಾರ್ ಜಲಸಂಧಿಗಳನ್ನು ಬಳಸಿಕೊಂಡು ಸಾಗಿರುವ ಈ ಚೀನೀ ಹಡಗಿನ ಚಟುವಟಿಕೆಗಳ ಹಿಂದೆ ಭವಿಷ್ಯದಲ್ಲಿ ಪರಮಾಣು ಜಲಾಂತರ್ಗಾಮಿ ಕಾರ್ಯಾಚರಣೆಗಳಿಗಾಗಿ ನಕ್ಷೆ ತಯಾರಿಸುವ ಉದ್ದೇಶ ಇದೆ ಎಂಬುದಾಗಿ ಈಗ ವರದಿಗಳಾಗಿವೆ.

ಮೇಲಿನ ಸುಂದಾ, ಲೊಂಬೊಕ್, ಒಂಬಿ-ವೆಟಾರ್ ಜಲಸಂಧಿಗಳು ಇಂಡೋನೇಷ್ಯಾದ ವ್ಯಾಪ್ತಿಗೆ ಒಳಪಟ್ಟಿವೆ. ಕೋವಿಡ್‌ ಸಾಂಕ್ರಾಮಿಕದ ನಂತರ 2022ರಲ್ಲಿ ಜಿನ್‌ ಪಿಂಗ್‌ ರನ್ನು ಮೊದಲ ಬಾರಿಗೆ ಇಂಡೋನೇಷ್ಯಾದ ಅಧ್ಯಕ್ಷ ಭೇಟಿ ಮಾಡಿರುವುದರ ಹಿಂದೆಯೂ ಇದೇ ಕಾರಣಗಳಿವೆ ಎನ್ನಲಾಗುತ್ತಿದೆ. ಚೀನಾದ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳಿಗಾಗಿ ಆಸ್ಟ್ರೇಲಿಯಾವು US ನಿರ್ಮಿತ ಪರಮಾಣು ಶಕ್ತಿ ಜಲಾಂತರ್ಗಾಮಿಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಇದು ಚೀನಾದ ಪಾಲಿಗೆ ಅರಗಿಸಿಕೊಳ್ಳದ್ದಾಗಿದೆ. ಇದಲ್ಲದೆ, ಚೀನಾವು ವ್ಯಾಪಾರಕ್ಕಾಗಿ ಆಫ್ರಿಕಾದ ಪೂರ್ವ ಮಂಡಳಿ ಮತ್ತು ಮಧ್ಯ-ಪ್ರಾಚ್ಯಕ್ಕೆ ಪರ್ಯಾಯ ಸಮುದ್ರ ಮಾರ್ಗಗಳನ್ನು ಅನ್ವೇಷಿಸುತ್ತಿದೆ. ಈ ಮಾರ್ಗಗಳು ಭಾರತದ ಮೇಲ್ವಿಚಾರಣೆಯಲ್ಲಿರುವ ಲಕ್ಷದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ ಒಂಬತ್ತು ಡಿಗ್ರಿ ಮತ್ತು 10-ಡಿಗ್ರಿ ಚಾನಲ್‌ಗಳ ಮೂಲಕ ಹಾದು ಹೋಗುತ್ತವೆ. ಹಾಗಾಗಿ ಚೀನಾವು ಹಿಂದೂ ಮಹಾಸಾಗರದಲ್ಲಿ ತನ್ನ ನೌಕಾಪಡೆಯನ್ನು ವಿಸ್ತರಿಸಲು ಯೋಚಿಸುತ್ತಿದ್ದು ಈ ಕಾರ್ಯಾಚರಣೆಗಳೂ ಅದರ ಭಾಗಗಳೇ ಆಗಿವೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!