Sunday, December 10, 2023

Latest Posts

ಕೋವಿಡ್ ಆರ್ಭಟಕ್ಕೆ ತತ್ತರಿಸಿದ ಡ್ರ್ಯಾಗನ್: ದಿನಕ್ಕೆ 30 ಸಾವಿರ + ಹೊಸ ಕೇಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೀನಾದಲ್ಲಿ ಕೋವಿಡ್ ಮತ್ತೆ ವಿಜೃಂಭಿಸುತ್ತಿದೆ. ಪ್ರಸ್ತುತ, ದಿನಕ್ಕೆ ಸರಾಸರಿ 30,000 ಕ್ಕೂ ಹೆಚ್ಚು ಕರೋನಾ ಪ್ರಕರಣಗಳು ವರದಿಯಾಗುತ್ತಿವೆ. ಬುಧವಾರ ಒಂದೇ ದಿನದಲ್ಲಿ 31,545 ಪ್ರಕರಣಗಳು ದಾಖಲಾಗಿವೆ. 27,517 ಜನರಲ್ಲಿ ಯಾವುದೇ ರೋಗಲಕ್ಷಣಗಳಿಲ್ಲ ಎಂದು ಅಲ್ಲಿನ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

ಒಂದೆಡೆ, ಚೀನಾದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ, ಕೋವಿಡ್ ಭಾರಿ ಪ್ರಮಾಣದಲ್ಲಿ ಅತಿರೇಕವಾಗಿದೆ. ಲಾಕ್ ಡೌನ್, ಪ್ರವಾಸೋದ್ಯಮ ನಿರ್ಬಂಧಗಳು ಮತ್ತು ಸಾಮೂಹಿಕ ಪರೀಕ್ಷೆಗಳಿಂದ ಯಾವುದೇ ಪ್ರಯೋಜನವಾಗುತ್ತಿಕ್ಕ. ಚೀನಾದ ಜನಸಂಖ್ಯೆಗೆ ಹೋಲಿಸಿದರೆ ವರದಿಯಾದ ಪ್ರಕರಣಗಳು ಕಡಿಮೆ ಶೇಕಡಾವಾರು ಆಗಿದ್ದರೂ, ಅಧಿಕಾರಿಗಳು ಕಟ್ಟುನಿಟ್ಟಾಗಿ ವರ್ತಿಸುತ್ತಿದ್ದಾರೆ. ಯಾವುದೇ ಪ್ರದೇಶದಲ್ಲಿ ಒಂದು ಅಥವಾ ಎರಡು ಪ್ರಕರಣಗಳು ವರದಿಯಾದರೂ, ಇಡೀ ಪ್ರದೇಶವನ್ನು ಲಾಕ್ ಡೌನ್ ಮಾಡಲಾಗುತ್ತಿದೆ. ಕೋವಿಡ್ ಸೋಂಕಿತರು ರೋಗಿಗಳನ್ನು ಸಂಪೂರ್ಣ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಮತ್ತೊಂದೆಡೆ, ಕೋವಿಡ್‌ನಿಂದಾಗಿ ಚೀನಾದ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಚೀನಾದಲ್ಲಿ ಸತತ ಮೂರನೇ ವರ್ಷ ಲಾಕ್‌ಡೌನ್ ಹೇರಲಾಗಿದೆ. ಹಲವು ದೇಶಗಳು ಕೋವಿಡ್‌ನಿಂದ ಚೇತರಿಸಿಕೊಂಡಿದ್ದರೂ, ಚೀನಾ ಅದರಿಂದ ಹೊರಬರುತ್ತಿಲ್ಲ. ಇದರಿಂದಾಗಿ ಜನರಿಗೆ ಕುಡಿಯುವ ನೀರು, ಔಷಧ, ಆಹಾರ ಸಿಗುತ್ತಿಲ್ಲ. ಇದರ ವಿರುದ್ಧ ಜನ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸರಕಾರ ಅವರನ್ನು ತೀವ್ರವಾಗಿ ಹತ್ತಿಕ್ಕುತ್ತಿದೆ. ಅಲ್ಲಿನ ಜನರ ಚಲನವಲನಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!