ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷ ಚೀನಾ ತನ್ನ ಮಿಲಿಟರಿ ಬಜೆಟ್ ಅನ್ನು ಶೇ.7.1ರಷ್ಟು ಹೆಚ್ಚಿಸಲಿದೆ ಎಂದು ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಚೀನಾ ಪ್ರಧಾನಿ ಲಿ ಕೆಕಿಯಾಂಗ್ ಅವರು, ಚೀನಾ ಸರ್ಕಾರದ ಬಜೆಟ್ ನಲ್ಲಿ ರಾಷ್ಟ್ರೀಯ ರಕ್ಷಣೆಗಾಗಿ ಸುಮಾರು 1.45 ಟ್ರಿಲಿಯನ್ ಯುವಾನ್ ಮೀಸಲಿಡಲಾಗಿದೆ. ಕಳೆದ ವರ್ಷ ಮಿಲಿಟರಿ ಬಜೆಟ್ ಅನ್ನು ಶೇ.6.8ರಷ್ಟು ಏರಿಕೆ ಮಾಡಲಾಗಿತ್ತು. ಈ ವರ್ಷ ಮತ್ತಷ್ಟು ಏರಿಕೆ ಮಾಡಲಾಗಿದೆ. ಈ ನಡುವೆ ಚೀನಾದ ಜಿಡಿಪಿ 5.5ಕ್ಕೆ ಕುಸಿದಿದ್ದು, ಇದು ಕಳೆದ ದಶಕದ ಕನಿಷ್ಠ ಮಟ್ಟಕ್ಕೆ ತಲುಪಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.3.2ರಷ್ಟು ಕುಸಿದಿದೆ.
ಚೀನಾದಲ್ಲಿ ಮಿಲಿಟರಿ ತರಬೇತಿ, ಯುದ್ಧ ಸನ್ನದ್ಧತೆಯನ್ನು ಹೆಚ್ಚಿಸಲಿದ್ದು, ಸಾರ್ವಭೌಮತೆ, ಭದ್ರತೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಲಿದೆ ಎಂದರು.
ಅಮೆರಿಕಕ್ಕೆ ಹೋಲಿಸಿದರೆ ಚೀನಾದ ಮಿಲಿಟರಿ ಬಜೆಟ್ ಕಡಿಮೆ ಇದ್ದು, ಅಮೆರಿಕ 700 ಮಿಲಿಯನ್ ಕೋಟಿ ಗೂ ಹೆಚ್ಚು ಮಿಲಿಟರಿ ಬಜೆಟ್ ಘೋಷಿಸಿತ್ತು.