ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌: ಕೇವಲ 12 ರನ್‌ ಗಳಿಂದ ಸೋತ ಇಂಗ್ಲೆಂಡ್, ಆಸ್ಟ್ರೇಲಿಯಾಗೆ ಭರ್ಜರಿ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐಸಿಸಿ ಮಹಿಳಾ ವಿಶ್ವಕಪ್‌ ನಲ್ಲಿ ಇಂಗ್ಲೆಂಡ್‌ ತಂಡಕ್ಕೆ ಸೋಲುಣಿಸಿ ಆಸ್ಟ್ರೇಲಿಯಾ ಭರ್ಜರಿ ಜಯ ದಾಖಲಿಸಿದೆ.
ಕೊನೆಯ ಓವರ್‌ ನಲ್ಲಿ 12 ರನ್‌ ಗಳಿಸಲು ಸೋತ ಇಂಗ್ಲೆಂಡ್‌ ತಂಡ ಆಸೀಸ್‌ ಮಹಿಳಾ ತಂಡದ ಬೌಲಿಂಗ್‌ ಗೆ ಶರಣಾಗಿದ್ದಾರೆ. ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 310 ರನ್ ಗಳಿಸಿತ್ತು. ಉತ್ತರವಾಗಿ ಇಂಗ್ಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 298 ರನ್‌ ಗಳಿಸಿ ಸೋಲನುಭವಿಸಿದರು,
ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರ್ತಿ ರಾಚೆಲ್ ಹೈನ್ಸ್ ಭರ್ಜರಿ ಶತಕ ಸಿಡಿಸಿ 131 ಎಸೆತಗಳಲ್ಲಿ 130 ರನ್ ಗಳಿಸಿದರು. ಈ ವೇಳೆ ಅವರು 14 ಬೌಂಡರಿ ಹಾಗೂ 1 ಸಿಕ್ಸರ್‌ ಬಾರಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಇನ್ನು ಬೆತ್ ಮೂನಿ 19 ಎಸೆತಗಳಲ್ಲಿ 27, ಅಲಿಸ್ಸಾ ಪೆರ್ರಿ14 ರನ್ ಗಳಿಸಿದರು.
ಇಂಗ್ಲೆಂಡ್‌ ನ ಬ್ಯಾಟರ್‌ ಬ್ಯೂಮಾಂಟ್ 82 ಎಸೆತಗಳಲ್ಲಿ 74 ರನ್ ಗಳಿಸಿದರೆ, ನೇಟ್ ಸಿವಾರ್ 109 ರನ್ ಗಳಿಸಿ ತಂಡವನ್ನು ಕೊನೆಯವರೆಗೆ ಮುನ್ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!