ಕರಾಚಿ ಬಾಂಬ್‌ ದಾಳಿಗೆ ಚೀನಾ ಸಿಡಿಮಿಡಿ: ಘಟನೆ ಮರುಕಳಿಸಬಾರದೆಂದು ಪಾಕ್‌ಗೆ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿನ್ನೆ ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾಲಯದಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿ ಬಗ್ಗೆ ಚೀನಾ ಆಕ್ರೋಶ ವ್ಯಕ್ತಪಡಿಸಿದೆ. ಪಾಕ್‌ನಲ್ಲಿ ನೆಲೆಸಿರುವ ಚೀನಾ ನಾಗರೀಕರಿಗೆ ರಕ್ಷಣೆಯಿಲ್ಲ ಎಂದು ಕಿಡಿಕಾರಿದ್ದು, ಮತ್ತೊಮ್ಮೆ ಇಂತಹ ಘಟನೆಗಳು ಮರುಕಳಿಸಬಾರದೆಂದು ಖಡಕ್‌ ಎಚ್ಚರಿಕೆ ನೀಡಿದೆ.

ಪಾಕಿಸ್ತಾನದಲ್ಲಿ, ಚೀನಾದ ಯೋಜನೆಗಳು ಹಾಗೂ ಚೀನಾ ಪ್ರಜೆಗಳನ್ನು ರಕ್ಷಿಸಲು ಭಯೋತ್ಪಾದನೆ ಎಂಬ ಮೂಲ ಸಮಸ್ಯೆಯ ಪರಿಹರಿಸಬೇಕು ಎಂದು ಚೀನಾ ಒತ್ತಾಯಿಸಿದೆ. ಪಾಕಿಸ್ತಾನದಲ್ಲಿರುವ ಚೀನಾದ ಕಂಪನಿಗಳು, ಯೋಜನೆಗಳು ಮತ್ತು ಸಿಬ್ಬಂದಿಗಳ ಭದ್ರತೆಯನ್ನು ರಕ್ಷಿಸಲು ಪಾಕಿಸ್ತಾನದ ಕಡೆಯಿಂದ ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕು ಎಂದು ಚೈನೀಸ್ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಚೀನಿಯರನ್ನು ಸೋಲಿಸಲು ಬರುವವರು ಕೊನೆಗೆ ತಾವೇ ನಾಶವಾಗುತ್ತಾರೆ ಎಂಬುದನನು ಆ ಸಂಸ್ಥೆಗಳಿಗೆ ಪಾಕ್‌ ಸ್ಪಷ್ಟಪಡಿಬೇಕಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.

ಘಟನೆಯ ಹೊಣೆ ಹೊತ್ತಿರುವ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪಾಕಿಸ್ತಾನದಲ್ಲಿನ ಚೀನಾ ನಾಗರಿಕರ ಮೇಲೆ ದಾಳಿ ಮಾಡುತ್ತಿರುವುದು ಇದೇ ಮೊದಲೇಲ್ಲ. ಈ ಹಿಂದೆಯೂ ಹಲವಾರು ಬಾರಿ ದಾಳಿ ನಡೆಸಿವೆ. ಮತ್ತೆ ಇಂತಹ ಘಟನೆಗಳು ನಡೆಯದಂತೆ ಪಾಕಿಸ್ತಾನ ನೋಡಿಕೊಳ್ಳಬೇಕು ಎಂದು ಚೀನಾ ಎಚ್ಚರಿಕೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!