ಹಿಂದೂ ಮಹಾಸಾಗರದಲ್ಲಿ ಮುಳುಗಿದ ಚೀನಾ ದೋಣಿ: 39 ಮೀನುಗಾರರು ಕಣ್ಮರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಿಂದೂ ಮಹಾಸಾಗರದಲ್ಲಿ ಮಂಗಳವಾರದಂದು ಚೀನಾ ದೇಶದ ಮೀನುಗಾರಿಕೆ ದೋಣಿ ಮುಳುಗಿದ್ದು, 39 ಮೀನುಗಾರರು ಕಣ್ಮರೆಯಾಗಿದ್ದಾರೆ ಎಂದು ಸಿಜಿಟಿಎನ್ ಸುದ್ದಿಸಂಸ್ಥೆ ವರದಿ ಮಾಡಿದೆ. ಕಣ್ಮರೆಯಾದ ಸಿಬ್ಬಂದಿ ಪೈಕಿ 17 ಚೀನಾ, 17 ಇಂಡೋನೇಷ್ಯಾ ಮತ್ತು ಐವರು ಫಿಲಿಪ್ಪೀನ್ಸ್‌ ದೇಶದ ಪ್ರಜೆಗಳು ಎಂದು ತಿಳಿದುಬಂದಿದೆ.

ನಾಪತ್ತೆಯಾಗಿರುವ ಸಿಬ್ಬಂದಿಯ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಮಂಗಳವಾರ ಬೆಳಗ್ಗೆ 3 ಗಂಟೆ ವೇಳೆಗೆ (ಬೀಜಿಂಗ್ ಕಾಲಮಾನ) ಈ ಘಟನೆ ಸಂಭವಿಸಿದೆ. ತಕ್ಷಣ ರಕ್ಷಣೆ ಮಾಡುವಂತೆ ಜೊತೆಗೆ ಮಾಹಿತಿ ಸಂಗ್ರಹಿಸುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಹೆಚ್ಚುವರಿ ರಕ್ಷಣಾ ಪಡೆಗಳನ್ನು ನಿಯೋಜಿಸಲು ತುರ್ತು ಪ್ರತಿಕ್ರಿಯೆ ಕಾರ್ಯವಿಧಾನವನ್ನು ಸಕ್ರಿಯಗೊಳಿಸಲು ಕೃಷಿ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯ, ಸಾರಿಗೆ ಸಚಿವಾಲಯ ಮತ್ತು ಶಾಂಡಾಂಗ್ ಪ್ರಾಂತ್ಯಕ್ಕೆ ಕ್ಸಿ ನಿರ್ದೇಶನ ನೀಡಿದ್ದಾರೆ.

ಚೀನಾ ವಿದೇಶಾಂಗ ಸಚಿವಾಲಯ ಮತ್ತು ವಿದೇಶದಲ್ಲಿರುವ ಸಂಬಂಧಿತ ರಾಯಭಾರ ಕಚೇರಿಗಳು ತಕ್ಷಣ ರಕ್ಷಣಾ ಕಾರ್ಯವನ್ನು ಸಂಘಟಿಸಲು ಸಂಬಂಧಿತ ಸ್ಥಳೀಯ ಪಕ್ಷಗಳೊಂದಿಗೆ ಸಂಪರ್ಕ ಸಾಧಿಸುವಂತೆಯೂ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!