Wednesday, March 29, 2023

Latest Posts

ಸ್ಪೈ ಬಲೂನ್ ಹೊಡೆದುರುಳಿಸಿದ ಅಮೆರಿಕ: ಏನೆಂದಿತು ಚೀನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೊನೆಗೂ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಅಮೆರಿಕ ಹೊಡೆದುರುಳಿಸಿದೆ. ಅಮೆರಿಕದ ವಾಯುಪ್ರದೇಶದಲ್ಲಿ ಮಿಲಿಟರಿ ಸ್ಥಾವರಗಳ ಮೆಲೆ ನಿಘಾ ಇಟ್ಟಿದ್ದ ಸ್ಪೈ ಬಲೂನ್‌ ಇದೀಗ ಪೀಸ್‌ ಪೀಸ್‌ ಆಗಿದೆ. ಅಷ್ಟು ದೊಡ್ಡ ಬಲೂನ್ ಕೆಡವಿದರೆ ಜನರಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಭಾವಿಸಿರುವ ಅಮೆರಿಕ ನಿನ್ನೆ ಮೊನ್ನೆ ಸೂಕ್ಷ್ಮವಾಗಿ ಅವಲೋಕನ ಮಾಡಿತ್ತು.

ಕೊನೆಗೆ ಕೆಲವು ಗಂಟೆಗಳ ಹಿಂದೆ ತಮ್ಮ ದೇಶದ ಯುದ್ಧ ವಿಮಾನಗಳ ಸಹಾಯದಿಂದ ಬಲೂನ್ ಅನ್ನು ಸಮುದ್ರಕ್ಕೆ ತಂದು ಸ್ಫೋಟಿಸಲಾಯಿತು ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕೆ ಚೀನಾ ಪ್ರತಿಕ್ರಿಯಿಸಿದ್ದು, ಮಾನವ ರಹಿತ ಬಲೂನ್ ಸ್ಫೋಟಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಏತನ್ಮಧ್ಯೆ, ಅಮೆರಿಕದ ಸುದ್ದಿ ವಾಹಿನಿಗಳು ಬಲೂನ್ ಸ್ಫೋಟಿಸಿದ ದೃಶ್ಯಗಳನ್ನು ಪ್ರಸಾರ ಮಾಡಿದೆ.

ಎಫ್-22 ಫೈಟರ್ ಜೆಟ್‌ನಿಂದ ಬಲೂನ್ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ. ಬಲೂನಿನ ಅವಶೇಷಗಳು ದಕ್ಷಿಣ ಕ್ಯಾಲಿಫೋರ್ನಿಯಾದ ಮಿರ್ಟಲ್ ಬೀಚ್ ಪ್ರದೇಶದಲ್ಲಿ ಬಿದ್ದವು. ಅವಶೇಷಗಳನ್ನು ಸಂಗ್ರಹಿಸಲು ಸೇನಾ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಅಮೆರಿಕ ಮತ್ತು ಚೀನಾ ನಡುವಿನ ಪ್ರತಿಕೂಲ ವಾತಾವರಣ ಹಿನ್ನೆಲೆಯಲ್ಲಿ ಈ ಬಲೂನ್ ಸಂಚಲನ ಮೂಡಿಸುತ್ತಿರುವುದು ಗಮನಾರ್ಹ.

ತೈವಾನ್ ವಿಷಯದ ಜೊತೆಗೆ, ಚೀನಾ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯು ಉಭಯ ದೇಶಗಳ ನಡುವೆ ಇನ್ನೂ ವಿವಾದದಲ್ಲಿದೆ. ಅಧಿಕಾರಿಗಳು ಅಮೆರಿಕದ ಮಿಲಿಟರಿ ವಿಮಾನದಿಂದ ಚೀನಾದ ಬಲೂನ್ ಅನ್ನು ಸಹ ಪರಿಶೀಲಿಸಿದರು. ಈ ವಿಷಯವನ್ನು ಅಮೆರಿಕದ ಅಧಿಕಾರಿಗಳು ಚೀನಾದ ಅಧಿಕಾರಿಗಳ ಮುಂದೆ ಪ್ರಸ್ತಾಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!