Wednesday, March 29, 2023

Latest Posts

ದಿನಭವಿಷ್ಯ| ಸಂವಹನದ ಕೊರತೆಯಿಂದ ಆಪ್ತರಲ್ಲಿ ಭಿನ್ನಮತ ಹುಟ್ಟಿಕೊಳ್ಳಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ನಿಮ್ಮ ಸಹನೆ ಕೆಣಕುವ ಪ್ರಸಂಗ ಎದುರಾಗುತ್ತದೆ. ಮಾನಸಿಕ ನಿಯಂತ್ರಣ ಅವಶ್ಯ. ಮನೆಯಲ್ಲಿನ ಕೆಲಸ ಕಾರ್ಯಗಳು ನಿಮ್ಮ ಇಂದಿನ ಆದ್ಯತೆ.

ವೃಷಭ
ಸಂಬಂಧದಲ್ಲಿ ಕೆಲವು ವಿಷಯಗಳು  ಗೌಪ್ಯವಾಗಿರಲಿ. ಬಹಿರಂಗಗೊಳಿಸದಿರಿ. ಯಾರದೋ ಕೋಪ ಎಲ್ಲರ ಮೇಲೆ ಹರಿಸುವಿರಿ.

ಮಿಥುನ
ಬದಲಾದ ಆಹಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಎಚ್ಚರಿಕೆ ತೆಗೆದುಕೊಳ್ಳಿ. ಕರ್ತವ್ಯದಲ್ಲಿ ಉದಾಸೀನತೆ ಒಳಿತಲ್ಲ.

ಕಟಕ
ಸಂವಹನದ ಕೊರತೆಯಿಂದ ಆಪ್ತರಲ್ಲಿ ಭಿನ್ನಮತ ಹುಟ್ಟಿಕೊಳ್ಳಬಹುದು. ಮಾತುಕತೆಯಿಂದ  ಪರಿಹರಿಸಿ. ಕೌಟುಂಬಿಕ ಅಸಹಕಾರ.

ಸಿಂಹ
ಕರ್ತವ್ಯದಲ್ಲಿ ವಿಫಲತೆ ಉಂಟಾಗಬಹುದು. ಇದರಿಂದ ಟೀಕೆಗೆ ಗುರಿಯಾಗುವಿರಿ.  ಆರೋಗ್ಯದತ್ತ ಗಮನ ಕೊಡಿ. ಪಥ್ಯಾಹಾರ ಒಳಿತು.

ಕನ್ಯಾ
ಅನವಶ್ಯ ಖರ್ಚು ಒದಗಿ ಬರಬಹುದು. ನಿಮ್ಮ ಆರೋಗ್ಯದ ಕುರಿತಂತೆ ಎಚ್ಚರಿಕೆ ವಹಿಸಬೇಕು. ಆಹಾರ ಸೇವನೆಯಲ್ಲಿ ಜಾಗೃತರಾಗಿರಿ.

ತುಲಾ
ನಿಮಗಿಷ್ಟವಾದ ಕಾರ್ಯ ಮಾಡಲು ಹಿಂಜರಿಕೆ ಬೇಡ. ಇತರರ ವಿರೋಧವನ್ನು ಲೆಕ್ಕಿಸಬೇಕಾಗಿಲ್ಲ. ಕೌಟುಂಬಿಕ ಸಹಕಾರ ಕಾಯ್ದುಕೊಳ್ಳಿ.

ವೃಶ್ಚಿಕ
ನಿಮ್ಮ ಕೆಲಸ ಇತರರಿಗೆ ಪ್ರೇರಣೆ ನೀಡುತ್ತದೆ.  ಸಾಮಾಜಿಕ ಕಾರ್ಯ ದಲ್ಲಿ ನಿಮಗೆ ಮೆಚ್ಚುಗೆ ಲಭಿಸುವುದು. ಆರ್ಥಿಕ ಸಮಸ್ಯೆ ಪರಿಹಾರ ಕಾಣಲಿದೆ.

ಧನು
ಕಚೇರಿಯಲ್ಲಿ ಜಾಣ್ಮೆ ಯಿಂದ ನಡಕೊಳ್ಳಿ. ಇತರರ ಜಗಳದಲ್ಲಿ ನೀವು ಬಲಿಪಶು ಆಗಬಹುದು.ಕೌಟುಂಬಿಕ ಒತ್ತಡಗಳ ಹೆಚ್ಚಳ.

ಮಕರ
ತೋಚಿದ್ದನ್ನೆಲ್ಲ ಮಾತನಾಡಬೇಡಿ. ಕೆಲವರಿಗೆ ನೋವು ತಂದೀತು. ಅದು ಮನಸ್ತಾಪಕ್ಕೆ ಕಾರಣ.  ಕೌಟುಂಬಿಕ ಭಿನ್ನಾಭಿಪ್ರಾಯ.

ಕುಂಭ
ಯಾರದೋ ಸಮಸ್ಯೆ ಪರಿಹರಿಸುವ ಹೊಣೆ ನಿಮ್ಮ ಹೆಗಲೇರಬಹುದು. ಸಾಧ್ಯವಾದಷ್ಟು ಅದರಿಂದ ದೂರವಿರಿ. ವಿವಾದ ಸಂಭವ.

ಮೀನ
ದಿನವಿಡೀ ಆಲಸ್ಯ.  ಆರ್ಥಿಕ ವ್ಯವಹಾರ
ದಲ್ಲಿ  ಅಂಕಿಅಂಶಗಳತ್ತ ಹೆಚ್ಚು ಗಮನಹರಿಸಿ. ಕಣ್ತಪ್ಪಿದರೆ ಪ್ರಮಾದ ವಾದೀತು. ಕೌಟುಂಬಿಕ ಸಾಮರಸ್ಯ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!