June 18, 2026
Thursday, June 18, 2026
spot_img

ಚಿನ್ನಸ್ವಾಮಿಯಲ್ಲಿ ಇಂದು ಇಂಟ್ರೆಸ್ಟಿಂಗ್ ಫೈಟ್‌ :‌ ತವರು ನೆಲದಲ್ಲಿ ಲೀಗ್‌ನ ಲಾಸ್ಟ್‌ ಮ್ಯಾಚ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿಗರಿಗೆ ಇಂದು ಖುಷಿಯ ಸಂಜೆ! ಹೌದು, ತವರಿನಲ್ಲಿ ಇಂದು ಆರ್‌ಸಿಬಿಯ ಮ್ಯಾಚ್‌ ನಡೆಯಲಿದೆ. ಈ ಸೀಸನ್‌ನ ತವರಿನ ಕಡೆಯ ಮ್ಯಾಚ್‌ ಇದು.

ಇಂದು ಸಂಜೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಗುಜರಾತ್‌ ಟೈಟನ್ಸ್‌ ಎದುರು ಸೆಣೆಸಲಿದೆ.

ಈ ಮ್ಯಾಚ್‌ಗೆ ಅಭಿಮಾನಿಗಳು ಕಾಯುತ್ತಿದ್ದು, ಬಹುತೇಕ ಎಲ್ಲ ಸೀಟ್‌ಗಳೂ ಭರ್ತಿಯಾಗಲಿದೆ. ಹೀಗಾಗಿ ಕ್ರೀಡಾಂಗಣದ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಕಳೆದ ಬಾರಿ ಮ್ಯಾಚ್‌ ವೇಳೆ ಎಷ್ಟೊಂದು ಮಂದಿಯ ಫೋನ್‌ಗಳು ಕಳುವಾಗಿದ್ದವು. ಇದನ್ನು ಕೂಡ ಪೊಲೀಸರು ಗಮನದಲ್ಲಿ ಇಟ್ಟುಕೊಂಡಿದ್ದಾರೆ.

ಸುಮಾರು 2,300 ಪೊಲೀಸ್‌ ಸಿಬ್ಬಂದಿ ಪಂದ್ಯದ ಭದ್ರತಾ ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಸಂಚಾರ ದಟ್ಟಣೆ ತಡೆಯಲು ಸಂಚಾರ ಪೊಲೀಸರು ಸ್ಟೇಡಿಯಂ ಹತ್ತಿರದ ರಸ್ತೆಗಳಿಗೆ ನೋ ಪಾರ್ಕಿಂಗ್‌ ವಲಯಗಳೆಂದು ಘೋಷಣೆ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !