Friday, June 9, 2023

Latest Posts

ದೇಶದ ಆಂತರಿಕ ಭದ್ರತೆಗೆ ಸಿಆರ್‌ಪಿಎಫ್ ಕೊಡುಗೆ ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

84ನೇ ಸಿಆರ್‌ಪಿಎಫ್ (ಕೇಂದ್ರೀಯ ಮೀಸಲು ಪೊಲೀಸ್ ಪಡೆ) ದಿನದ ಪ್ರಯುಕ್ತ ರಾಷ್ಟ್ರದ ಆಂತರಿಕ ಭದ್ರತೆಯಲ್ಲಿ ಸಿಆರ್‌ಪಿಎಫ್ ಕೊಡುಗೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದರು.

ಛತ್ತೀಸ್‌ಗಢದ ಬಸ್ತಾರ್ ವಿಭಾಗದ ಪ್ರಧಾನ ಕಛೇರಿಯಾದ ಜಗದಲ್‌ಪುರದಲ್ಲಿ ಮುಖ್ಯ ಅತಿಥಿಯಾಗಿ 84ನೇ ಸಿಆರ್‌ಪಿಎಫ್‌ ದಿನದ ಪರೇಡ್ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಮೊದಲ ಬಾರಿಗೆ ನಕ್ಸಲೀಯರ ಪ್ರದೇಶದಲ್ಲಿ ಸಿಆರ್‌ಪಿಎಫ್ ದಿನವನ್ನು ಆಚರಿಸಲಾಗುತ್ತಿದೆ. ದೇಶದ ಆಂತರಿಕ ಭದ್ರತೆಗೆ ಸಿಆರ್‌ಪಿಎಫ್ ಕೊಡುಗೆ ನೀಡಿದೆ. ಮಹಿಳಾ ಸಿಆರ್‌ಪಿಎಫ್ ಸಿಬ್ಬಂದಿಯನ್ನು ರಾಷ್ಟ್ರವು ತಲೆ ಎತ್ತಿ ನೋಡುತ್ತಿದೆ. ಒಟ್ಟಾರೆ ಸಿಆರ್‌ಪಿಎಫ್ ಕೊಡುಗೆ ಗಮನಾರ್ಹವಾಗಿದೆ. ದೇಶದಲ್ಲಿ ಕಳೆದ ಚುನಾವಣೆಗಳಲ್ಲಿ ಸಿಆರ್‌ಪಿಎಫ್ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಸಿಆರ್‌ಪಿಎಫ್ ನಕ್ಸಲರ ವಿರುದ್ಧ ಹೋರಾಡಿದೆ ಮತ್ತು ದೇಶದ ಹಲವು ಪ್ರದೇಶಗಳಲ್ಲಿ ಅವರನ್ನು ಹೊಡೆದುರುಳಿಸಿದೆ” ಎಂದು ಅವರು ಹೇಳಿದರು.

ಈ ವೇಳೆ ಅಮಿತ್‌ ಶಾ ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಗೆ ಗೌರವ ಸಲ್ಲಿಸಿದರು.

ಈ ವರ್ಷಾಂತ್ಯಕ್ಕೆ ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮುಂಬರುವ ಚುನಾವಣೆಯ ಪ್ರಚಾರಕ್ಕೆ ಬಿಜೆಪಿ ವೇಗ ಪಡೆದುಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!