ಹೊಸ ಮನೆ ಕಟ್ತಿದ್ದೀರಾ? ಅಥವಾ ಮನೆಗೆ ಹೊಸ ಪೇಂಟ್ ಮಾಡಿಸುವ ಆಲೋಚನೆಯಲ್ಲಿದ್ದೀರಾ? ಹಾಗಿದ್ರೆ ಮನೆಯ ಶಾಂತಿ ನೆಮ್ಮದಿಗಾಗಿ ಈ ರೀತಿ ಬಣ್ಣಗಳನ್ನು ಆಯ್ಕೆ ಮಾಡಿ..
ತಿಲಿ ನೀಲಿ ಬಣ್ಣ : ಈ ಬಣ್ಣವನ್ನು ಮನೆಯ ಒಳಗೆ ಹಚ್ಚಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ, ಮನೆಯೇ ಆಕಾಶದಂತೆ ನೆಮ್ಮದಿ ನೀಡುತ್ತದೆ.

ಹಸಿರು ಶೇಡ್ಸ್ : ಹಸಿರು ಬಣ್ಣದಲ್ಲಿ ನಿಮ್ಮಿಷ್ಟದ ಯಾವುದೇ ಹಸಿರನ್ನು ಗೋಡೆಗೆ ಹಚ್ಚಬಹುದು. ಇದು ನಿಸರ್ಗವನ್ನು ಗೌರವಿಸಿದಂತೆ ಹಾಗೂ ನಿಮ್ಮ ಮೆದುಳನ್ನು ಶಾಂತವಾಗಿ ಇಟ್ಟುಕೊಳ್ಳುತ್ತದೆ.

ತಿಳಿ ನೇರಳೆ ಬಣ್ಣ: ಇದು ಬೆಡ್‌ರೂಮ್‌ಗೆ ಸೂಕ್ತವಾದ ಬಣ್ಣ, ಒಳ್ಳೆಯ ನಿದ್ದೆ ಹಾಗೂ ರಿಲ್ಯಾಕ್ಸೇಷನ್‌ಗೆ ಉತ್ತಮ

ಬಿಳಿ, ಬೇಜ್, ಕ್ರೀಮ್: ಈ ಬಣ್ಣಗಳನ್ನು ಸಾಕಷ್ಟು ಮಂದಿ ತಮ್ಮ ಮನೆಗೆ ಹೊಡೆಸುತ್ತಾರೆ. ಇದರಿಂದಾಗಿ ಮನೆ ದೊಡ್ಡದಾಗಿ ಹಾಗೂ ಹೆಚ್ಚು ಬೆಳಕು ಇದೆ ಎನಿಸುತ್ತದೆ. ಮನೆಯಲ್ಲಿ ಪಾಸಿಟಿವಿಟಿ ತುಂಬುತ್ತದೆ.




