May 26, 2026
Tuesday, May 26, 2026
spot_img

CINE | ಆಕ್ಷನ್, ಸಸ್ಪೆನ್ಸ್, ರಣವೀರ್ ಮ್ಯಾಜಿಕ್: TVಗೆ ಬರ್ತಿದೆ ‘ಧುರಂಧರ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

2025ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ್ದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಇದೀಗ ಕಿರುತೆರೆಯಲ್ಲೂ ಅಬ್ಬರಿಸಲು ಸಜ್ಜಾಗಿದೆ.

ಥಿಯೇಟರ್‌ನಲ್ಲಿ ಆಕ್ಷನ್ ಮತ್ತು ಸಸ್ಪೆನ್ಸ್ ಮೂಲಕ ಸಿನಿಪ್ರಿಯರನ್ನು ಸೆಳೆದಿದ್ದ ಈ ಬ್ಲಾಕ್‌ಬಸ್ಟರ್ ಚಿತ್ರ, ಇದೀಗ ಮೇ 30ರಂದು ಸಂಜೆ 7 ಗಂಟೆಗೆ ಮೂರು ಪ್ರಮುಖ ವಾಹಿನಿಗಳಲ್ಲಿ ಏಕಕಾಲಕ್ಕೆ ಪ್ರಸಾರವಾಗಲಿದೆ. ಸಿನಿಮಾ ಟಿವಿಗೆ ಬರುತ್ತಿದೆ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ರಣವೀರ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿದೆ.

ಅಂಡರ್‌ಕವರ್ ಏಜೆಂಟ್‌ನ ರೋಚಕ ಕಥೆ

ಖ್ಯಾತ ನಿರ್ದೇಶಕ ಆದಿತ್ಯ ಧರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ರಣವೀರ್ ಸಿಂಗ್ ಭಾರತೀಯ ಗುಪ್ತಚರ ಏಜೆಂಟ್ ಪಾತ್ರದಲ್ಲಿ ಮಿಂಚಿದ್ದಾರೆ. ಕರಾಚಿಯ ಅಪರಾಧ ಜಗತ್ತಿನೊಳಗೆ ನುಗ್ಗುವ ಏಜೆಂಟ್‌ನ ಸಾಹಸಮಯ ಕಥೆ ಪ್ರೇಕ್ಷಕರನ್ನು ಸೆಳೆದಿತ್ತು.

ಇದನ್ನೂ ಓದಿ:

ತಾರಾಗಣವೇ ಚಿತ್ರದ ಹೈಲೈಟ್

ಚಿತ್ರದಲ್ಲಿ ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಮ್‌ಪಾಲ್, ಆರ್. ಮಾಧವನ್ ಸೇರಿದಂತೆ ಹಲವು ಸ್ಟಾರ್ ಕಲಾವಿದರು ನಟಿಸಿದ್ದಾರೆ. ಹಾಡುಗಳು ಮತ್ತು ಆಕ್ಷನ್ ದೃಶ್ಯಗಳು ಸಿನಿಮಾ ಯಶಸ್ಸಿಗೆ ದೊಡ್ಡ ಕಾರಣವಾಗಿದ್ದವು.

ಟಿವಿ ಪ್ರೀಮಿಯರ್‌ಗೆ ಭಾರೀ ನಿರೀಕ್ಷೆ

ಚಿತ್ರದ ಟಿವಿ ಪ್ರಸಾರ ಕುರಿತು ಮಾತನಾಡಿದ ನಿರ್ದೇಶಕ ಆದಿತ್ಯ ಧರ್, “ಪ್ರೇಕ್ಷಕರ ಪ್ರೀತಿ ನಮಗೆ ದೊಡ್ಡ ಶಕ್ತಿ. ಈಗ ಈ ಸಿನಿಮಾವನ್ನು ಮನೆಮನೆಗೂ ತಲುಪಿಸುತ್ತಿರುವುದು ಖುಷಿ ತಂದಿದೆ” ಎಂದಿದ್ದಾರೆ. ಕುಟುಂಬ ಸಮೇತ ವೀಕ್ಷಿಸಲು ಸೂಕ್ತ ಸಿನಿಮಾ ಎಂದು ನಿರ್ಮಾಪಕರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !