August 7, 2026
Friday, August 7, 2026
spot_img

CINE | ಸೀಕ್ವೆಲ್‌ನಲ್ಲಿ ಬಿಗ್ ಸರ್‌ಪ್ರೈಸ್: ‘ಜೈಲರ್ 2’ಗೆ ಶಾರುಖ್ ಅಲ್ಲ, ಹೃತಿಕ್ ರೋಷನ್ ಎಂಟ್ರಿಯಂತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿತ್ತು. ಈಗ ಇದರ ಸೀಕ್ವೆಲ್ ‘ಜೈಲರ್ 2’ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿದ್ದು, ಚಿತ್ರದಲ್ಲಿನ ಅತಿಥಿ ಪಾತ್ರಗಳ ಕುರಿತು ಭಾರಿ ಚರ್ಚೆಗಳು ನಡೆಯುತ್ತಿವೆ.

ಮೊದಲ ಭಾಗದಲ್ಲಿ ಶಿವರಾಜ್‌ಕುಮಾರ್, ಮೋಹನ್‌ಲಾಲ್ ಮತ್ತು ಜಾಕಿ ಶ್ರಾಫ್‌ರಂತಹ ದೊಡ್ಡ ಸ್ಟಾರ್‌ಗಳು ಅತಿಥಿ ಪಾತ್ರಗಳಲ್ಲಿ ಮಿಂಚಿ ಚಿತ್ರದ ಯಶಸ್ಸಿಗೆ ಕಾರಣವಾಗಿದ್ದರು. ಅದೇ ರೀತಿ ಎರಡನೇ ಭಾಗದಲ್ಲೂ ಬಾಲಿವುಡ್‌ನ ಬಿಗ್ ಸ್ಟಾರ್ ಒಬ್ಬರನ್ನು ಕರೆತರಲು ಚಿತ್ರತಂಡ ಯೋಜಿಸುತ್ತಿದೆ.

ಇದನ್ನೂ ಓದಿ:

ಹೃತಿಕ್ ರೋಷನ್ ಜತೆ ಮಾತುಕತೆ:

ಇತ್ತೀಚಿನ ವರದಿಗಳ ಪ್ರಕಾರ, ಈ ಹಿಂದೆ ಕೇಳಿಬಂದಂತೆ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಬದಲಿಗೆ, ಚಿತ್ರತಂಡವು ಈಗ ‘ಗ್ರೀಕ್ ಗಾಡ್’ ಖ್ಯಾತಿಯ ಹೃತಿಕ್ ರೋಷನ್‌ರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಚಿತ್ರದಲ್ಲಿನ ಒಂದು ಪ್ರಮುಖ ಮತ್ತು ಪವರ್‌ಫುಲ್ ಅತಿಥಿ ಪಾತ್ರಕ್ಕಾಗಿ ಹೃತಿಕ್‌ನನ್ನು ಸಂಪರ್ಕಿಸಲಾಗಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.

ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದು, ಹೃತಿಕ್ ರೋಷನ್ ಎಂಟ್ರಿಯಾದರೆ ಚಿತ್ರದ ಹೈಪ್ ಮತ್ತಷ್ಟು ಹೆಚ್ಚಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !