ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ಅಭಿನಯದ ‘ಏಕ್ ದಿನ್’ ಸಿನಿಮಾ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಹೊಸ ಜೋಡಿಯ ಕಾಂಬಿನೇಷನ್ ಕುತೂಹಲ ಹುಟ್ಟಿಸಿದ್ದರೂ, ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಚಿತ್ರ ಹಿಂದೆ ಬಿದ್ದಂತಾಗಿದೆ.
ಮೊದಲ ದಿನ ಸಾಧಾರಣ ಆರಂಭ ಪಡೆದ ಈ ಸಿನಿಮಾ, ಎರಡನೇ ದಿನವೂ ಕಲೆಕ್ಷನ್‌ನಲ್ಲಿ ಏರಿಕೆ ಕಾಣಲಿಲ್ಲ. ರಜಾದಿನವಿದ್ದರೂ ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಮಟ್ಟದ ಜನಸಂದಣಿ ಕಾಣಿಸದಿರುವುದು ಚಿತ್ರತಂಡಕ್ಕೆ ಹಿನ್ನಡೆಯಾಗಿದೆ. ಮೊದಲ ದಿನ 1.15 ಕೋಟಿ, ಎರಡನೇ ದಿನ ಕೇವಲ 1 ಕೋಟಿ ಕಲೆಕ್ಷನ್ ಮಾಡಿದೆ ಅಷ್ಟೇ.
ಇದನ್ನೂ ಓದಿ:
ಇನ್ನೊಂದೆಡೆ, ಬಿಡುಗಡೆಯಾದ ಇತರ ದೊಡ್ಡ ಸಿನಿಮಾಗಳು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವುದು ‘ಏಕ್ ದಿನ್’ ಚಿತ್ರದ ಮೇಲೆ ನೇರ ಪರಿಣಾಮ ಬೀರಿದೆ. ಬಲಿಷ್ಠ ಪೈಪೋಟಿಯ ನಡುವೆ ಈ ಸಿನಿಮಾ ತನ್ನ ಸ್ಥಾನ ಕಾಯ್ದುಕೊಳ್ಳಲು ಹೋರಾಟ ನಡೆಸುತ್ತಿದೆ.
ಭಾವನಾತ್ಮಕ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪ್ರೀತಿ ಮತ್ತು ಸಂಬಂಧಗಳ ಸೂಕ್ಷ್ಮ ಅಂಶಗಳನ್ನು ತೆರೆಗೆ ತರಲಾಗಿದೆ. ಸಾಯಿ ಪಲ್ಲವಿ ಅವರ ಬಾಲಿವುಡ್ ಪ್ರವೇಶಕ್ಕೂ ಈ ಸಿನಿಮಾ ವಿಶೇಷವಾಗಿದ್ದರೂ, ಆರಂಭಿಕ ಪ್ರದರ್ಶನ ಮಾತ್ರ ನಿರೀಕ್ಷೆಗೆ ತಕ್ಕಂತೆ ಮೂಡಿಬಂದಿಲ್ಲ.



