July 30, 2026
Thursday, July 30, 2026
spot_img

CINE | ವೀಕೆಂಡ್ ಮೂವಿ ಪ್ಲ್ಯಾನ್ ಮಾಡೋರಿಗೆ ಗುಡ್ ನ್ಯೂಸ್: ಒಂದೇ ವಾರದಲ್ಲಿ 4 ಕನ್ನಡ ಸಿನಿಮಾಗಳು ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಈ ವಾರ ಕನ್ನಡ ಚಿತ್ರರಂಗದಲ್ಲಿ ಯಾವುದೇ ಬಿಗ್ ಬಜೆಟ್ ಸಿನಿಮಾಗಳು ಅಬ್ಬರಿಸದೇ ಇದ್ದರೂ, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ವಿಭಿನ್ನ ಕಥಾಹಂದರದ ಒಟ್ಟು ನಾಲ್ಕು ಚಿತ್ರಗಳು ಜುಲೈ 31ರ ಶುಕ್ರವಾರದಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿವೆ.

ಸರ್ಕಾರಿ ನ್ಯಾಯ ಬೆಲೆ ಅಂಗಡಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಚಕ್ರವರ್ತಿ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದ ಕುಮಾರ್ ಬಂಗಾರಪ್ಪ, ಈಗ ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ಚಿತ್ರದ ಮೂಲಕ ಮತ್ತೆ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಾತ್ವಿಕ್ ಪವನ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ಈ ಸಿನಿಮಾದಲ್ಲಿರೇಷನ್ ಅಂಗಡಿಯ ಸುತ್ತವೇ ಸಾಗುವ ಈ ಚಿತ್ರದ ಮುಖ್ಯ ಹಾಡೊಂದರಲ್ಲಿ ಗಾಯಕ ನವೀನ್ ಸಜ್ಜು ಕಾಣಿಸಿಕೊಂಡು ಧ್ವನಿ ನೀಡಿದ್ದಾರೆ. ಅನಂತ್ ಆರ್ಯನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಶ್ರೀಮತಿ ಸಿಂಧೂರ

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ನಟನೆಯ ‘ಶ್ರೀಮತಿ ಸಿಂಧೂರ’ ಚಿತ್ರವೂ ಇದೇ ವಾರ ಬಿಡುಗಡೆಯಾಗುತ್ತಿದೆ. ಈಗಾಗಲೇ ಟಿವಿ ಚಾನೆಲ್‌ಗಳ ಸಂದರ್ಶನ ಮತ್ತು ಪ್ರೆಸ್‌ಮೀಟ್‌ಗಳ ಮೂಲಕ ಚಿತ್ರತಂಡ ಭರ್ಜರಿ ಪ್ರಚಾರ ನಡೆಸಿದೆ. ವಿಜಯ್ ರಾಘವೇಂದ್ರ ಅವರಿಗೆ ಪ್ರಿಯಾ ಹೆಗ್ಡೆ ಜೋಡಿಯಾಗಿದ್ದಾರೆ. ಅನುಭವಿ ನಿರ್ದೇಶಕ ಅನಂತ್ ರಾಜು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಅವರ ಮಧುರ ಸಂಗೀತ ಚಿತ್ರಕ್ಕಿದೆ.

ಜಾಲಿ

ಹೊಸ ಪ್ರತಿಭೆಗಳೇ ಸೇರಿ ಮಾಡಿರುವ ‘ಜಾಲಿ’ ಸಿನಿಮಾ ಕೂಡ ಇದೇ ಶುಕ್ರವಾರ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದೆ. ತಾರುಷ್ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸುವುದರ ಜತೆಗೆ ನಾಯಕನಾಗಿಯೂ ನಟಿಸಿದ್ದಾರೆ. ನವನಟಿ ಪದ್ಮಶ್ರೀ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಯೋಗೇಶ್ವರ್ ಆರ್. ಕ್ಯಾಮರಾ ವರ್ಕ್ ಮಾಡಿದ್ದು, ನಿತಿನ್ ರಾಜ್ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ;

ಸುಮನ್ ರಂಗನಾಥ್ ಅಭಿನಯದ ನೂತನ ಚಿತ್ರ:

ಇವುಗಳ ಜತೆಗೆ ಸದಾ ಹಸಿರು ನಟಿ ಸುಮನ್ ರಂಗನಾಥ್ ಪ್ರಮುಖ ಪಾತ್ರವಿರುವ ಮತ್ತೊಂದು ವಿಭಿನ್ನ ಶೈಲಿಯ ಚಿತ್ರವೂ ಸಹ ಈ ವಾರ ಸಿನಿಮಾ ರಸಿಕರನ್ನು ರಂಜಿಸಲು ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !