April 21, 2026
Tuesday, April 21, 2026
spot_img

CINE | ‘ಜೈಲರ್ 2’ ಚಿತ್ರೀಕರಣ ಕಂಪ್ಲೀಟ್: ರಜನಿಕಾಂತ್ ಮುಂದಿನ ಪ್ಲಾನ್ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂದು ಸಾಬೀತುಪಡಿಸುತ್ತಿರುವ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ್ದಾರೆ. ಭಾರೀ ಯಶಸ್ಸು ಕಂಡ ಜೈಲರ್ ಚಿತ್ರದ ಮುಂದುವರಿದ ಭಾಗ ‘ಜೈಲರ್ 2’ ಈಗ ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿದೆ.

ಕಳೆದ ವರ್ಷ ಆರಂಭವಾದ ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಅಂತ್ಯಗೊಂಡಿದ್ದು, ನಿರ್ದೇಶಕ ನೆಲ್ಸನ್ ದಿಲೀಪಕುಮಾರ್ ಹಾಗೂ ತಂಡದೊಂದಿಗೆ ಸಂಭ್ರಮಾಚರಣೆ ನಡೆದಿದೆ. ಕೇರಳ, ಹೈದರಾಬಾದ್, ಚೆನ್ನೈ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದ್ದು, ಕರ್ನಾಟಕದಲ್ಲೂ ಕೆಲವು ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ವಿಶೇಷವೆಂದರೆ, ಚಿತ್ರವನ್ನು ಹೆಚ್ಚಿನ ಭಾಗದಲ್ಲಿ ಹೊರಾಂಗಣದಲ್ಲಿ ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ:

ಮೊದಲ ಭಾಗದಂತೆಯೇ ಈ ಚಿತ್ರದಲ್ಲೂ ಅತಿಥಿ ಪಾತ್ರಗಳು ಗಮನ ಸೆಳೆಯಲಿವೆ. ಶಿವರಾಜ್ಕುಮಾರ್, ಮೋಹನಲಾಲ್ ಜೊತೆಗೆ ಶಾರುಖ್ ಖಾನ್ ಹಾಗೂ ತೆಲುಗಿನ ನಟ ಬಾಲಕೃಷ್ಣ ಕಾಣಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಮಾತುಕತೆ ಇದೆ. ಆದರೆ ಅಧಿಕೃತ ಮಾಹಿತಿ ಇನ್ನೂ ಪ್ರಕಟವಾಗಿಲ್ಲ.

ಚಿತ್ರದಲ್ಲಿ ಸಂಗೀತವನ್ನು ಅನಿರುದ್ಧ್ ರವಿಚಂದ್ರನ್ ನೀಡಿದ್ದು, ನಿರ್ಮಾಣವನ್ನು ಸನ್ ನೆಟ್‌ವರ್ಕ್ಸ್‌ ಮಾಡುತ್ತಿದೆ. ಆಗಸ್ಟ್‌ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದರ ಬಳಿಕ ರಜನಿಕಾಂತ್, ಕಮಲ್ ಹಾಸನ್ ನಿರ್ಮಾಣದ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಇಬ್ಬರೂ ಒಂದೇ ಚಿತ್ರದಲ್ಲಿ ನಟಿಸುವ ಯೋಜನೆಯೂ ಇದೆ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !