April 21, 2026
Tuesday, April 21, 2026
spot_img

Why So | ಬೇಸಿಗೆಯಲ್ಲಿ ಹುದುಗಿಸಿದ ಆಹಾರಗಳನ್ನು ಹೆಚ್ಚಾಗಿ ಸೇವಿಸಬಾರ್ದು ಅಂತಾರಲ್ಲ ಯಾಕೆ?

ಬೇಸಿಗೆಯ ಕಾಲದಲ್ಲಿ ನಮ್ಮ ದೇಹದ ತಾಪಮಾನ ಈಗಾಗಲೇ ಹೆಚ್ಚಿರುತ್ತೆ. ಈ ಸಮಯದಲ್ಲಿ ಹುದುಗಿಸಿದ (fermented) ಆಹಾರಗಳನ್ನು ಹೆಚ್ಚು ಸೇವಿಸಿದ್ರೆ ಕೆಲವರಿಗೆ ತೊಂದರೆ ಆಗಬಹುದು ಅಂತ ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಎಲ್ಲರಿಗೂ ಸರಿ ಹೋಗಲ್ಲ ಅಂತಲ್ಲ ಸರಿಯಾದ ಪ್ರಮಾಣ, ಸರಿಯಾದ ಸಮಯ ಮುಖ್ಯ.

ಹುದುಗಿಸಿದ ಆಹಾರಗಳು ದೇಹದ ಮೆಟಾಬಾಲಿಸಂ ಹೆಚ್ಚಿಸುತ್ತವೆ. ಬೇಸಿಗೆಯಲ್ಲಿ ಇದರಿಂದ ದೇಹದ ಒಳಗಿನ ಉಷ್ಣತೆ ಹೆಚ್ಚಾಗಿ ಅಸ್ವಸ್ಥತೆ ಉಂಟಾಗಬಹುದು.

ಇಡ್ಲಿ, ದೋಸೆ ಹಿಟ್ಟಿನಂಥ ಆಹಾರಗಳು ಬೇಗ ಫರ್ಮೆಂಟ್ ಆಗುತ್ತವೆ. ಬೇಸಿಗೆಯಲ್ಲಿ ಹೆಚ್ಚು ಸಮಯ ಹುದುಗಿದರೆ ಆಮ್ಲತೆ ಹೆಚ್ಚಾಗಿ ಹೊಟ್ಟೆ ಉರಿ, ಗ್ಯಾಸ್ಟ್ರಿಕ್ ಸಮಸ್ಯೆ ಬರಬಹುದು.

ಇದನ್ನೂ ಓದಿ:

ಹೆಚ್ಚು ತಾಪಮಾನದಲ್ಲಿ ಹುದುಗಿಸಿದ ಆಹಾರಗಳು ಬೇಗ ಕೆಡುತ್ತವೆ. ಹಾಳಾದ ಆಹಾರ ತಿಂದರೆ ಫುಡ್ ಪಾಯಿಸನಿಂಗ್ ಆಗುವ ಅಪಾಯ ಜಾಸ್ತಿ.

ಕೆಲವೊಮ್ಮೆ ಇಂತಹ ಆಹಾರಗಳು ದೇಹದ ನೀರಿನ ಮಟ್ಟ ಕಡಿಮೆ ಮಾಡಬಹುದು. ಇದರಿಂದ ತಲೆ ಸುತ್ತು, ದೌರ್ಬಲ್ಯ ಕಾಣಿಸಬಹುದು.

ಕೆಲವರಿಗೆ ಹುದುಗಿಸಿದ ಆಹಾರ ಸೂಪರ್ ಆಗಿ ಸೂಟ್ ಆಗಬಹುದು, ಆದರೆ ಕೆಲವರಿಗೆ ಬೇಸಿಗೆಯಲ್ಲಿ ಅಸಹನೀಯವಾಗಬಹುದು. ನಿಮ್ಮ ದೇಹದ ಪ್ರತಿಕ್ರಿಯೆ ಗಮನಿಸುವುದು ಮುಖ್ಯ.

ಹುದುಗಿಸಿದ ಆಹಾರ ಸಂಪೂರ್ಣವಾಗಿ ಬಿಡಬೇಕಾಗಿಲ್ಲ. ಆದರೆ ಫ್ರೆಶ್ ಆಗಿ ತಯಾರಿಸಿದವು ಮಾತ್ರ ತಿನ್ನಿ, ಪ್ರಮಾಣ ಕಡಿಮೆ ಇಡಿ, ಬಿಸಿ ಸಮಯದಲ್ಲಿ ಹೆಚ್ಚು ತಿನ್ನೋದು ತಪ್ಪಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !