CINE | ಮಿಲ್ಕ್​​ ಬ್ಯೂಟಿ ಜೊತೆ ಕಾಣಿಸಿಕೊಳ್ಳಲಿದ್ದಾರೆ ಸ್ಯಾಂಡಲ್​ವುಡ್​ ಹೀರೋ ವಸಿಷ್ಠ ಸಿಂಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್​ವುಡ್​ನ ಹೀರೋ ವಸಿಷ್ಠ ಸಿಂಹ ಎರಡು ವರ್ಷದ ಹಿಂದೆ ಓದೆಲಾ ರೈಲ್ವೆ ಸ್ಟೇಷನ್ ಎನ್ನುವ ಸಿನಿಮಾದಲ್ಲಿ ನಟಿ ಹೆಬಾ ಪಟೇಲ್ ಜೊತೆ ವಸಿಷ್ಠ ಅಭಿನಯಿಸಿದ್ದರು. ಇದೇ ಮೂವಿಯ ಸೀಕ್ವೆಲ್​ ಬರುತ್ತಿದ್ದು, ಮಿಲ್ಕ್​​ ಬ್ಯೂಟಿ ತಮನ್ನಾ ಜೊತೆ ವಸಿಷ್ಠ ಸಿಂಹ ಹೆಜ್ಜೆ ಹಾಕಲಿದ್ದಾರೆ.

ತೆಲುಗುನಲ್ಲಿ ಅಶೋಕ್ ತೇಜ ನಿರ್ದೇಶನ ಮಾಡಿದ್ದ ಓದೆಲಾ ರೈಲ್ವೆ ಸ್ಟೇಷನ್ ಚಿತ್ರ ಸೂಪರ್ ಹಿಟ್​ ಆಗಿತ್ತು. ಕ್ರೈಮ್ ಆ್ಯಂಡ್​ ಥ್ರಿಲ್ಲರ್ ಮೂವಿಯಾದ ಇದು ಜನರ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಇದೇ ಸಿನಿಮಾದ ಸೀಕ್ವೆಲ್​ ಮಾಡಲಾಗುತ್ತಿದ್ದು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ. ಮಿಲ್ಕ್​ ಬ್ಯೂಟಿ ತಮನ್ನಾ, ವಸಿಷ್ಠ ಸಿಂಹ ಫೋಟೋ ವೈರಲ್ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!