CINE | ಅದಿತಿ ನನ್ನ ಪಾರ್ಟ್‌ನರ್, ಕಡೆಗೂ ನಿಜ ಒಪ್ಪಿಕೊಂಡ ಸಿದ್ಧಾರ್ಥ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಆದರೆ ಈ ಬಗ್ಗೆ ಎಂದಿಗೂ ಒಪ್ಪಿಕೊಂಡಿಲ್ಲ.

ಆದರೆ ಇದೇ ಮೊದಲ ಬಾರಿಗೆ ಅದಿತಿಯನ್ನು ನನ್ನ ಪಾರ್ಟ್‌ನರ್ ಎಂದು ಸಿದ್ಧಾರ್ಥ್ ಹೇಳಿಕೊಂಡಿದ್ದಾರೆ. ಅದಿತಿ ಜೊತೆಗಿನ ಫೋಟೊ ಶೇರ್ ಮಾಡಿ ಅದಿತಿಗೆ ಬರ್ತ್‌ಡೇ ವಿಶಸ್ ತಿಳಿಸಿದ್ದಾರೆ. ಈ ಮಧ್ಯೆ ನನ್ನ ಜೊತೆ ಇರುವುದಕ್ಕಾಗಿ ಧನ್ಯವಾದ ಪಾರ್ಟ್‌ನರ್ ಎಂದಿದ್ದಾರೆ.

ಅದಿತಿ ಹಾಗೂ ಸಿದ್ಧಾರ್ಥ್ ಇಬ್ಬರೂ ತಮ್ಮ ಪಾರ್ಟ್‌ನರ್‌ಗಳಿಂದ ಡಿವೋರ್ಸ್ ಪಡೆದು ಇದೀಗ ಹೊಸ ಹೆಜ್ಜೆ ಇಡುತ್ತಿದ್ದಾರೆ. ಆದಷ್ಟು ಬೇಗ ಮದುವೆ ವಿಷಯ ಹೊರಬರಲಿ ಎಂದು ಫ್ಯಾನ್ಸ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!