May 30, 2026
Saturday, May 30, 2026
spot_img

CINE | ಇದ್ಯಾವ ಫ್ಲಾಪ್ ಮೂವಿ ಗುರೂ..! ಬಜೆಟ್ 1400 ಕೋಟಿ ರೂ, ಗಳಿಸಿದ್ದು ಕೇವಲ 6 ಕೋಟಿ ರೂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೊಡ್ಡ ಬಜೆಟ್, ಖ್ಯಾತ ನಟರು, ಭಾರೀ ನಿರೀಕ್ಷೆ.. ಇವೆಲ್ಲ ಇದ್ದರೂ ಸಿನಿಮಾ ಗೆಲ್ಲಲೇಬೇಕು ಎಂಬ ನಿಯಮ ಇಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಚಿತ್ರ ‘ಡೆಸರ್ಟ್ ವಾರಿಯರ್’.

ಸೌದಿ ಅರೇಬಿಯಾದ ಮಹತ್ವಾಕಾಂಕ್ಷಿ ಯೋಜನೆಯಾಗಿ ನಿರ್ಮಾಣವಾದ ಈ ಸಿನಿಮಾ, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಮುಖಭಂಗ ಅನುಭವಿಸಿದೆ. ಸುಮಾರು 1400 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಈ ಐತಿಹಾಸಿಕ ಸಾಹಸಮಯ ಚಿತ್ರವು ವಿಶ್ವದಾದ್ಯಂತ ಕೇವಲ 6 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ಇತ್ತೀಚಿನ ವರ್ಷಗಳಲ್ಲೇ ಅತಿದೊಡ್ಡ ಆರ್ಥಿಕ ಸೋಲಿನ ಸಿನಿಮಾಗಳ ಸಾಲಿಗೆ ಸೇರಿದೆ.

ಇದನ್ನೂ ಓದಿ:

ಖ್ಯಾತ ನಟರಾದ ಆಂಥೋನಿ ಮ್ಯಾಕಿ ಹಾಗೂ ಬೆನ್ ಕಿಂಗ್ಸ್ಲಿ ಅಭಿನಯಿಸಿದ್ದರೂ ಪ್ರೇಕ್ಷಕರ ಮನ ಗೆಲ್ಲಲು ಸಿನಿಮಾ ವಿಫಲವಾಯಿತು. ಚಿತ್ರದ ಕಥೆ ದುರ್ಬಲವಾಗಿದೆ, ಚಿತ್ರಕಥೆಯಲ್ಲಿ ಗೊಂದಲವಿದೆ ಮತ್ತು ಭಾವನಾತ್ಮಕ ಸಂಪರ್ಕವೇ ಮೂಡಲಿಲ್ಲ ಎಂಬ ಟೀಕೆಗಳು ಕೇಳಿಬಂದಿವೆ.

ಜೊತೆಗೆ ನಿರ್ಮಾಣ ಹಂತದ ಅಡಚಣೆಗಳು, ಬಿಡುಗಡೆಯಲ್ಲಿ ವಿಳಂಬ ಹಾಗೂ ಸರಿಯಾದ ಪ್ರಚಾರದ ಕೊರತೆಯೂ ಹಿನ್ನಡೆಯ ಕಾರಣಗಳಾಗಿ ಪರಿಣಮಿಸಿವೆ. ಒಟ್ಟಿನಲ್ಲಿ, ಕೋಟ್ಯಂತರ ಹಣ ಸುರಿದರೆ ಮಾತ್ರ ಸಿನಿಮಾ ಯಶಸ್ಸು ಖಚಿತವಲ್ಲ; ಬಲವಾದ ಕಥೆಯೇ ನಿಜವಾದ ಗೆಲುವಿನ ಮಂತ್ರ ಎಂಬುದನ್ನು ‘ಡೆಸರ್ಟ್ ವಾರಿಯರ್’ ಸ್ಪಷ್ಟಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !