‘ಚಿತ್ರರಂಗ ಇರುವುದು ಹಣ ಮಾಡೋಕಲ್ಲ’: ಪಠಾಣ್ ವಿರುದ್ಧ ಕಂಗನಾ ಟಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾರುಖ್​ ಖಾನ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಪಠಾಣ್​’ ಇಂದು (ಜ.25) ​ ಆಗಿ ರಿಲೀಸ್​ ಆಗಿದ್ದು, ಎಲ್ಲ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ಮೊದಲ ದಿನ ಈ ಸಿನಿಮಾಗೆ 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಆಗುವ ನಿರೀಕ್ಷೆ ಇದೆ. ಇದರ ನಡುವೆ ಟೀಕೆಗಳು ಕೂಡ ಕೇಳಿಬರುತ್ತಿದೆ. ವಿವಿದೆಡೆ ಸಿನಿಮಾವನ್ನು ವಿರೋಧಿಸಿದ್ದಾರೆ.

ಈ ಸಂದರ್ಭಕ್ಕೆ ಸರಿಯಾಗಿ ನಟಿ ಕಂಗನಾ ರಣಾವತ್​ (Kangana Ranaut) ಅವರು ಕೊಂಕು ನುಡಿದಿದ್ದಾರೆ. ‘ಚಿತ್ರರಂಗ ಇರುವುದು ಹಣ ಮಾಡೋಕಲ್ಲ’ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನಿನ್ನೆಯಷ್ಟೇ (ಜ.24) ಟ್ವಿಟರ್​ಗೆ ಮರಳಿರುವ ಕಂಗನಾ ರಣಾವತ್​ ಅವರು ,‘ಯಶಸ್ಸನ್ನು ತೋರಿಸಬೇಕು ಎಂದಾಗಲೆಲ್ಲ ದುಡ್ಡಿನ ಅಂಕಿ-ಅಂಶವನ್ನು ಮುಖಕ್ಕೆ ಹೊಡೆದಂತೆ ತೋರಿಸುವ ಮಟ್ಟಕ್ಕೆ ಚಿತ್ರರಂಗದವರು ಇಳಿದಿದ್ದಾರೆ. ಕಲೆಗೆ ಬೇರೆ ಯಾವುದೇ ಉದ್ದೇಶವೇನೂ ಇಲ್ಲ ಎಂಬಂತೆ ವರ್ತಿಸುತ್ತಾರೆ. ಇದು ಅವರ ಕೀಳು ಜೀವನವನ್ನು ತೋರಿಸುತ್ತದೆ. ಚಿತ್ರರಂಗ ಒಂದು ಉದ್ಯಮ ಹೌದು. ಆದರೆ ಇದು ಬೇರೆ ಬಿಸ್ನೆಸ್​ ರೀತಿ ಕೋಟಿಗಟ್ಟಲೆ ದುಡ್ಡು ಮಾಡೋಕೆ ಇರುವುದಲ್ಲ’ ಎಂದು ಪೋಸ್ಟ್​ ಮಾಡಿದ್ದಾರೆ.

ಸಾಮಾನ್ಯವಾಗಿ ಸಿನಿಮಾ ಅಂದಾಗ ಅಲ್ಲಿ ಒಂದು ಸಿನಿಮಾ ಎಷ್ಟು ಕಲೆಕ್ಷನ್​ ಮಾಡಿತು? ಆ ಚಿತ್ರಕ್ಕೆ ಯಾವೆಲ್ಲ ಪ್ರಶಸ್ತಿಗಳು ಬಂದವು ಅಥವಾ ವಿಮರ್ಶಕರಿಂದ ಎಂತಹ ಪ್ರತಿಕ್ರಿಯೆ ಬಂತು ಎಂಬುದರ ಆಧಾರದ ಮೇಲೆ ಚಿತ್ರದ ಯಶಸ್ಸನ್ನು ಅಳೆಯಲಾಗುತ್ತದೆ. ಆದರೆ ನಟಿ ಕಂಗನಾ ರಣಾವತ್​ ಅವರು ಈಗ ಬೇರೆಯದೇ ವಾದ ಮಂಡಿಸುತ್ತಿದ್ದಾರೆ.

20 ತಿಂಗಳ ಹಿಂದೆ ಆಕ್ಷೇಪಾರ್ಹ ಟ್ವೀಟ್​ ಮಾಡಿದ್ದಕ್ಕಾಗಿ ಕಂಗನಾ ರಣಾವತ್​ ಅವರ ಟ್ವಿಟರ್​ ಖಾತೆಯನ್ನು ಸಸ್ಪೆಂಡ್​ ಮಾಡಲಾಗಿತ್ತು. ಅದೀಗ ಮತ್ತೆ ಆ್ಯಕ್ಟೀವ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!