ನಾನು ಇರೋದಾದ್ರೆ ಭಾರತದಲ್ಲಿ, ಗಂಡನ ಜೊತೆಯಲ್ಲಿಯೇ ಸಾಯ್ತೀನಿ: ಪಾಕ್ ಮಹಿಳೆಯ ಹೊಸ ವರಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಪ್ರಜೆಯನ್ನು ಪ್ರೀತಿಸಿ ಆತನಿಗಾಗಿ ತನ್ನ ದೇಶವನ್ನೇ ಬಿಟ್ಟು ಬಂದು ಪಾಕಿಸ್ತಾನದ ಮಹಿಳೆ ಮದುವೆಯಾಗಿದ್ದಳು. ಇದಾದ ಬಳಿಕ ಆಕೆಯನ್ನು ಆತ ಬೆಂಗಳೂರಿಗೆ ಕರೆತಂದು ಒಟ್ಟಿಗೆ ವಾಸಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಈಕೆಯ ಬಂಧನವಾಗಿತ್ತು.

ಇದೀಗ ಆಕೆ ಪೋಲೀಸರ ಮುಂದೆ ಹೊಸ ವರಸೆ ಶುರುಮಾಡಿದ್ದಾಳೆ. ನಾನು ಇರೋದಾದ್ರೆ ಭಾರತ (India) ದಲ್ಲಿಯೇ ಇರ್ತೀನಿ. ಗಂಡನ ಜೊತೆಯಲ್ಲಿಯೇ ಸಾಯ್ತೀನಿ. ಹೀಗಂತ ಕಣ್ಣೀರು ಹಾಕಿದ್ದಾಳೆ. ನಾನು ಪ್ರೀತಿಸಿ ಪ್ರೀತಿಗಾಗಿ ಅಲ್ಲಿಂದ ಬಂದಿದ್ದೇನೆ ನಾನು ಆತನನ್ನು ಬಿಟ್ಟು ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾಳೆ.

ನಾನು ಪ್ರೀತಿಸಿ ಅಲ್ಲಿಂದ ಬಂದಿದ್ದೀನಿ ತವರಿಗೆ ಹೋಗಲು ಒಲ್ಲೆ ಎನ್ನುತ್ತಿದ್ದಾಳಂತೆ ಇಕ್ರಾ ಜಿವಾನಿ. ನಾನು ಪತಿ ಮುಲಾಯಂ ಸಿಂಗ್ ಯಾದವ್ ಬಿಟ್ಟು ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾಳೆ.

ಆದ್ರೆ ಕಾನೂನಿನಲ್ಲಿ ಇದಕ್ಕೆಲ್ಲಾ ಅವಕಾಶ ಇಲ್ಲ. ಯುವತಿ ಒಲ್ಲೆ ಎಂದರೂ ಆಕೆಯನ್ನ ಡಿಪೋರ್ಟ್ ಮಾಡಲು ಬೇಕಾದ ಪ್ರಕ್ರಿಯೆ ನಡೆಸುತ್ತಾ ಇದ್ದಾರೆ. ಸದ್ಯ ಪೊಲೀಸರು ಮತ್ತು ಎಫ್‍ಆರ್ ಆರ್ ಒ ಅಧಿಕಾರಿಗಳು ಯುವತಿ ಭಾರತಕ್ಕೆ ಬಂದಿರೋದೇ ಅಕ್ರಮವಾಗಿ, ಹೀಗಾಗಿ ಯುವತಿಯನ್ನ ಪಾಕಿಸ್ತಾನಕ್ಕೆ ಕಳಿಸಲು ಮುಂದಾಗಿದ್ದಾರೆ.

ಕೇಂದ್ರ ಸರ್ಕಾರದ ಸಂಬಂಧಪಟ್ಟ ಏಜೆನ್ಸಿಗಳ ಜೊತೆ ಎಫ್‍ಆರ್‍ಆರ್‍ಓ ಸಂಪರ್ಕ ಮಾಡಿದ್ದಾರೆ. ಪಾಕ್ ಯುವತಿ ವಾಪಸ್ ಕಳಿಸಲು ಕನಿಷ್ಠ ಎರಡು ತಿಂಗಳ ಸಮಯ ಬೇಕಾಗುತ್ತೆ. ಹೀಗಾಗಿ ಎರಡು ದೇಶಗಳ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಯುವತಿಯನ್ನ ವಾಪಸ್ ಕಳಿಸಬೇಕು. ಸದ್ಯ ಯುವತಿಯನ್ನ ಡಿಪೋರ್ಟ್ ಮಾಡಲು ಬೇಕಾದ ಕಾನೂನು ಪ್ರಕ್ರಿಯೆ ಪರಿಶೀಲನೆಯನ್ನು ಎಫ್‍ಆರ್ ಆರ್ ಓ ಮತ್ತು ಪೊಲೀಸರು ನಡೆಸಿದ್ದಾರೆ.

ಇದರ ಜೊತೆಗೆ ಪಾಕ್ ಯುವತಿ ಇಕ್ರಾ ಜಿವಾನಿ ಮತ್ತು ಮುಲಾಯಂ ಸಿಂಗ್ (Mulayam Singh Yadav) ಮದುವೆ ಬಗ್ಗೆಯೇ ಅನುಮಾನ ವ್ಯಕ್ತವಾಗಿದ್ದು, ಪೊಲೀಸರ ವಿಚಾರಣೆ ವೇಳೆ ಇಬ್ಬರು ಮದುವೆಯಾಗಿದ್ದೀವಿ ಎಂದಿದ್ದಾರೆ. ಆದರೆ ಮದುವೆಯಾದ ಬಗ್ಗೆ ಯಾವುದೇ ಅಧಿಕೃತ ದಾಖಲೆ, ಫೋಟೊಗಳಿಲ್ಲ. ಮದುವೆಯಾದ ಬಗ್ಗೆ ಮ್ಯಾರೇಜ್ ಸರ್ಟಿಫಿಕೆಟ್ ಕೂಡ ಇಲ್ಲ. ಬೇರೆ ದಾಖಲಾತಿಗಳು ಕೂಡ ಪತ್ತೆಯಿಲ್ಲ. ಈ ರೀತಿ ಮದುವೆಯನ್ನ ಒಪ್ಪಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

ವಿದೇಶಿ ಮಹಿಳೆಯನ್ನ ಮದುವೆಯಾದಾಗ ಕಾನೂನಾತ್ಮಕ ದಾಖಲೆ ಇರಬೇಕು. ಮುಲಾಯಂ ಸಿಂಗ್ ಯಾದವ್ ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಪೊಲೀಸರ ಸಿದ್ಧ ಮಾಡಿಕೊಳ್ತಾ ಇದ್ದಾರೆ. ಸದ್ಯ ಈ ಬಗ್ಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಿರೋ ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!