Monday, November 28, 2022

Latest Posts

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ

ಹೊಸದಿಗಂತ ವರದಿ ಹುಬ್ಬಳ್ಳಿ:

ನಗರಕ್ಕೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಪೌರ ಸನ್ಮಾನ ಮಾಡಲಾಯಿತು.

ರಾಷ್ಟ್ರಪತಿ ಅವರಿಗೆ ಶಾಲು, ಸಿದ್ಧಾರೂಢ ಸ್ವಾಮೀಜಿಯವರ ಬೆಳ್ಳಿ ಮೂರ್ತಿ, ಸಿದ್ಧಾರೂಢರ ಚರಿತ್ರೆ ಕುರಿತ ಪುಸ್ತಕ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಹಾಪೌರ ಈರೇಶ ಅಂಚಟಗೇರಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು, ಉತ್ತರ‌ ಕರ್ನಾಟಕ ಶರಣ ಬಸವಣ್ಣ ಹಾಗೂ ಸಿದ್ಧಾರೂಢರ ಆಧ್ಯಾತ್ಮ ತಾಣವಾಗಿದೆ. ಈ ಪುಣ್ಯ ಭೂಮಿಯಲ್ಲಿ ಒರಿಸ್ಸಾದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹೆಣ್ಞುಮಗಳಿಗೆ ನೀವು ತೋರಿದ ಸನ್ಮಾನ, ದೇಶದ ಇಡೀ ಹೆಣ್ಣುಮಕ್ಕಳಿಗೆ ತೋರಿದ ಸನ್ಮಾನ ಹಾಗೂ ಗೌರವವಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!