ನಾಗರಿಕರೇ ಎಚ್ಚರ! ಒರಿಜಿನಲ್‌ ಆಧಾರ್‌ ಕಾರ್ಡ್‌ ಹಂಚಿಕೊಳ್ಳುವ ಬಗ್ಗೆ ಕೇಂದ್ರ ನೀಡಿದ ಮಾಹಿತಿಯೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆಧಾರ್‌ ಕಾರ್ಡ್‌ ಗಳ ದುರುಪಯೋಗವನ್ನು ತಡೆಗಟ್ಟಲು ಮೂಲ ಆಧಾರ್‌ ಪ್ರತಿಯ ಬದಲಾಗಿ ಮುಖವಾಡ ಪ್ರತಿ(ಮಾಸ್ಕ್ಡ್)‌ ಪ್ರತಿಗಳನ್ನು ಮಾತ್ರವೇ ಹಂಚಿಕೊಳ್ಳುವಂತೆ ಕೇಂದ್ರ ಸರ್ಕಾರ ಹೇಳಿದೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ “”ನಿಮ್ಮ ಆಧಾರ್‌ನ ಫೋಟೊಕಾಪಿಯನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳಬೇಡಿ. ಅದು ದುರುಪಯೋಗವಾಗಬಹುದು. ಪರ್ಯಾಯವಾಗಿ, ದಯವಿಟ್ಟು ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ಪ್ರದರ್ಶಿಸುವ ಮುಖವಾಡದ ಆಧಾರ್ ಪ್ರತಿಯನ್ನು ಬಳಸಿ” ಎಂದು ಹೇಳಿದೆ.

ಅಲ್ಲದೇ ಪರವಾನಗಿ ಪಡೆಯದ ಖಾಸಗಿ ಸಂಸ್ಥೆಗಳು, ಚಲನಚಿತ್ರ ಮಂದಿರಗಳಿಗೆ ಆಧಾರ್ ಕಾರ್ಡ್‌ನ ಪ್ರತಿಗಳನ್ನು ಸಂಗ್ರಹಿಸಲು ಅಥವಾ ಇರಿಸಿಕೊಳ್ಳಲು ಅನುಮತಿಸುವುದಿಲ್ಲ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ಬಳಕೆದಾರರ ಪರವಾನಗಿ ಪಡೆದ ಸಂಸ್ಥೆಗಳು ಮಾತ್ರ ಆಧಾರ್‌ ಪ್ರತಿಗಳನ್ನು ಬಳಸಬಹುದು. ನಾಗರಿಕರು ತಮ್ಮ ಆಧಾರ್ ಕಾರ್ಡ್‌ಗಳನ್ನು ಹಂಚಿಕೊಳ್ಳುವ ಮೊದಲು UIDAI ನಿಂದ ಮಾನ್ಯವಾದ ಬಳಕೆದಾರ ಪರವಾನಗಿಯನ್ನು ಪರಿಶೀಲಿಸಬೇಕು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತನ್ನ ಸೂಚನೆಯಲ್ಲಿ ತಿಳಿಸಿದೆ.

ಮುಖವಾಡದ ಆಧಾರ್‌ ಪ್ರತಿ ಪಡೆಯುವುದು ಹೇಗೆ?
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ದ ಅಧಿಕೃತ ವೆಬ್‌ ಸೈಟಿನಲ್ಲಿ ಮುಖವಾಡದ ಆಧಾರ್‌ ಪ್ರತಿಗಳು ಲಭ್ಯವಿದ್ದು ಆಧಾರ್‌ ಮರೆಮಾಚುವ ಆಪ್ಶನ್‌ ತೆಗೆದುಕೊಂಡು ಡೌನ್ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!