September 18, 2026
Friday, September 18, 2026
spot_img

ಇಂದು ನಿಮ್ಮ ಫೋನ್‌ನಲ್ಲಿ ಜೋರಾಗಿ ಸೈರನ್‌ ಮೊಳಗಿದ್ರೆ ಭಯಪಡಬೇಡಿ! ಇದೇನಂದ್ರೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ನಿಮ್ಮ ಫೋನ್‌ ಏನಾದ್ರೂ ಜೋರಾಗಿ ಸೌಂಡ್‌ ಮಾಡಿದ್ರೆ, ನನ್ನ ಫೋನ್‌ ಹ್ಯಾಕ್‌ ಆಯ್ತಾ? ಯಾರಾದ್ರೂ ಫೋನ್‌ ಕಂಟ್ರೋಲ್‌ಗೆ ತೆಗೆದುಕೊಂಡಿದ್ದಾರಾ ಎಂದೆಲ್ಲಾ ಹೆದರಬೇಡಿ. ಇದು ತುರ್ತು ಎಚ್ಚರಿಕೆಯ ಸಂದೇಶವಾಗಿದೆ.

ಬೀಪ್‌, ಸೈರನ್‌ ಅಥವಾ ಅನಿರೀಕ್ಷಿತವಾದ ಯಾವುದೇ ಮೆಸೇಜ್‌ ಬಂದರೂ ಅದರ ಬಗ್ಗೆ ಭಯ ಬೇಡ. ಸರ್ಕಾರ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷೆ ಮಾಡುತ್ತಿದೆ ಅಷ್ಟೆ.

ಪ್ರಕೃತಿ ವಿಕೋಪ ಬಂದಾಗ ನಾಗರಿಕರನ್ನು ರಕ್ಷಿಸಲು ಭಾರತ ತನ್ನದೇ ಆದ ವ್ಯವಸ್ಥೆಯೊಂದನ್ನು ತಯಾರಿಸುತ್ತಿದೆ. ಸೆಲ್‌ ಬ್ರಾಡ್‌ಕಾಸ್ಟ್‌ ಅಲರ್ಟ್‌ ಹೆಸರಿನ ಈ ಸಿಸ್ಟಮ್‌ನ್ನು ದೇಶಾದ್ಯಂತ ಪರೀಕ್ಷೆ ಮಾಡಲಾಗುತ್ತಿದೆ. ವಿಕೋಪ ಅಥವಾ ವಾರ್‌ ರೀತಿಯ ಎಮರ್ಜೆನ್ಸಿಗಳು ಬಂದಾಗ ನೇರವಾಗಿ ನಾಗರಿಕರ ಮೊಬೈಲ್‌ಗೆ ಅಲರ್ಟ್‌ ಬರುತ್ತದೆ.

ಈ ಸೆಲ್‌ ಬ್ರಾಡ್‌ಕಾಸ್ಟ್‌ ಸೇವೆ ಆರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಇದರ ಭಾಗವಾಗಿ ಇಂದು ಎನ್‌ಡಿಎಮ್‌ಎನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಂದೇಶ ಬರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !