ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನಾಥ ಮಕ್ಕಳ ತಾಯಿ ಎಂದೇ ಪ್ರಸಿದ್ಧರಾಗಿದ್ದವರು ಮಹಾರಾಷ್ಟ್ರದ ಡಾ. ಸಿಂಧುತಾಯಿ ಸಪ್ಕಾಲ್. ಪತಿ, ತವರಿನಿಂದಲೂ ಹೊರದೂಡಲ್ಪಟ್ಟ ಈಕೆ ಮುಂದೆ ಸಾವಿರಾರು ಅನಾಥ ಮಕ್ಕಳ ಪೋಷಣೆ ಮಾಡಿದ್ದಾರೆ. ಇಡೀ ಸಮಾಜವೇ ಆಕೆಯ ಎದುರು ಕೈ ಮುಗಿಯುವಂತೆ ಮಾಡಿದ ಆಕೆಯ ನಿಸ್ವಾರ್ಥ ಸೇವೆಗೆ ಒಲಿದು ಬಂದಿದ್ದು ಪದ್ಮಶ್ರೀ ಸೇರಿದಂತೆ 750ಕ್ಕೂ ಹೆಚ್ಚು ಪ್ರಶಸ್ತಿಗಳು.. ಇಂತಹ ಮಹಾತಾಯಿಯ ಬದುಕಿನ ಬಗ್ಗೆ ಈ ವಿಡಿಯೊದಲ್ಲಿ ತಿಳಿಯೋಣ…