ದಾಂಪತ್ಯಕ್ಕೆ ಕಾಲಿಡಲು ಮಹಿಳಾ ವೈದ್ಯರ ಪ್ಲಾನ್: ಗೋವಾದಲ್ಲಿ ಆಗ್ತಾರೆ ಅಂತೆ ಮದುವೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಲ ಬದಲಾದಂತೆ ಜನರ ಜೀವನ ಶೈಲಿಯಲ್ಲಿ ಬದಲಾವಣೆಗಳು ಆಗುತ್ತಿರುತ್ತದೆ. ಹಿಂದೆ ಮಹಿಳೆ-ಮಹಿಳೆ, ಪುರುಷ- ಪುರುಷ ನಡುವಿನ ಪ್ರೇಮ, ಸಲಿಂಗಿ ವಿವಾಹ ನಡೆದರೆ ಎಲ್ಲರನ್ನು ಹುಬ್ಬೇರಿಸುವಂತೆ ನಡೆಯುತ್ತಿತ್ತು. ಆದರೆ ಇಂದು ಕಾಲ ಬದಲಾಗಿದೆ ಜನರು ಎಲ್ಲವನ್ನು ಒಂದು ರೀತಿಯಲ್ಲಿ ನೋಡುತ್ತಿರುತ್ತಾರೆ. ಇದೀಗ ಅಂತಹದೇ ವಿವಾಹ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.
ಮಹಾರಾಷ್ಟ್ರದ ನಾಗಪುರ ಇಬ್ಬರು ಮಹಿಳಾ ವೈದ್ಯರು ಮದುವೆಯಾಗಲು ನಿರ್ಧಾರ ಮಾಡಿದ್ದು, ಕಳೆದ ವಾರವಷ್ಟೇ ನಿಶ್ಚಿತಾರ್ಥ ನಡೆದಿದೆ.
ಈ ನಿಶ್ಚಿತಾರ್ಥಕ್ಕೆ ‘ಕಮಿಟ್​ಮೆಂಟ್ ರಿಂಗ್ ಸಮಾರಂಭ’ ಎಂದು ಅವರಿಟ್ಟ ಹೆಸರು. ಇನ್ನೇನು ಕೆಲವೇ ದಿನಗಳಲ್ಲಿ ಗೋವಾದಲ್ಲಿ ದಾಂಪತ್ಯಕ್ಕೆ ಕಾಲಿಡಲು ಎಲ್ಲ ಸಿದ್ಧತೆ ನಡೆಸಿಕೊಂಡಿದ್ದಾರೆ.
ಇಂತಹ ಅಪರೂಪ ವಿವಾಹಕ್ಕೆ ಸಿದ್ಧತೆ ನಡೆಸಿದ ವೈದ್ಯೆಯರೇ ಪರೊಮಿತಾ ಮುಖರ್ಜಿ ಮತ್ತು ಸುರಭಿ ಮಿತ್ರ.
ಇನ್ನು ಈ ಕುರಿತು ಮಾತನಾಡಿದ ಪರೊಮಿತಾ ಮುಖರ್ಜಿ, ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ಇದನ್ನು ನಾವು ಜೀವಮಾನದ ಬದ್ಧತೆ ಎಂದು ಕರೆಯುತ್ತೇವೆ ಎಂದಿದ್ದಾರೆ.
ಇವರ ಲೈಂಗಿಕ ಹಿತಾಸಕ್ತಿ ಬಗ್ಗೆ 2013ರಿಂದ ಪರೊಮಿತಾ ಮುಖರ್ಜಿ ತಂದೆಗೆ ತಿಳಿದಿತ್ತು. ಆದರೆ, ತಾಯಿಗೆ ತಿಳಿದಿರಲಿಲ್ಲ. ಈ ಬಗ್ಗೆ ಇತ್ತೀಚೆಗೆ ನನ್ನ ತಾಯಿಗೆ ಹೇಳಿದಾಗ ಅವರು ಮೊದಲಿಗೆ ಶಾಕ್​ಗೆ ಒಳಗಾದರೂ, ನಂತರ ಮದುವೆಗೆ ಒಪ್ಪಿದ್ದಾರೆ ಎಂದು ಹೇಳಿದ್ದಾರೆ.
ಸುರಭಿ ಮಿತ್ರ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ನನ್ನ ಮನೆಯವರಿಗೆ ಗೊತ್ತಿತ್ತು, ಆದರೆ ವಿರೋಧಿಸಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!