Wednesday, September 28, 2022

Latest Posts

ಹಿಂದು ಮಹಾ ಗಣಪತಿಯ ದಶ೯ನ ಪಡೆದ ಸಿಎಂ ಬಸವರಾಜ ಬೊಮ್ಮಾಯಿ

ಹೊಸದಿಗಂತ ವರದಿ ಕಲಬುರಗಿ: 

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಕಲಬುರಗಿ ನಗರದ ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ 21 ದಿನಗಳ ಹಿಂದು ಜಾಗರಣ ವೇದಿಕೆ ಅಡಿಯಲ್ಲಿ ಪ್ರತಿಷ್ಟಾಪನೆ ಮಾಡಲಾದ ಹಿಂದು ಮಹಾ ಗಣಪತಿಯ ದರ್ಶನ ಪಡೆದುಕೊಂಡರು.

ಈ ವೇಳೆ ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಹಾಗೂ ಹಿಂದು ಮಹಾಗಣಪತಿಯ ಸಮಿತಿ ಅಧ್ಯಕ್ಷರಾದ ನಾಗೇಂದ್ರ ಕಾಬಾಡೆ ಅವರು ಮುಖ್ಯಮಂತ್ರಿ ಅವರಿಗೆ ಭಾರತ ಮಾತೇಯ ಭಾವಚಿತ್ರ ನೀಡಿ, ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ,ಸಚಿವ ಮುನಿರತ್ನ, ಪ್ರಾಂತ ಬೌದ್ಧಿಕ ಪ್ರಮುಖರಾದ ಕೃಷ್ಣ ಜೋಶಿ, ವಿಭಾಗ ಪ್ರಚಾರಕರಾದ ವಿಜಯ್ ಮಹಾಂತೇಶ, ವಿಭಾಗದ ಸಂಘಟನಾ ಕಾರ್ಯದರ್ಶಿ ಅರುಣ ಬಿನ್ನಾಡಿ,ಶಿವರಾಜ್ ಸಂಗೋಳಗಿ, ಅಶ್ವಿನ್ ಕುಮಾರ್,ಸತೀಶ್ ಮಾಹುರ್,ಪ್ರಶಾಂತ್ ಗುಡ್ಡಾ,ಭಾಗ೯ವಿ ಸೇರಿದಂತೆ ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!