8 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ: ‘ಕಾಂಗ್ರೆಸ್ ಛೋಡೋ ಯಾತ್ರೆ’ ಆರಂಭವಾಗಿದೆ ಎಂದ ಗೋವಾ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಮತ್ತು ವಿರೋಧ ಪಕ್ಷದ ನಾಯಕ ಮೈಕೆಲ್ ಲೋಬೋ ಸೇರಿದಂತೆ ಗೋವಾದ ಎಂಟು ಕಾಂಗ್ರೆಸ್ ಶಾಸಕರು ಬುಧವಾರ ಗೋವಾದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ದಿಗಂಬರ ಕಾಮತ್, ಮೈಕೆಲ್ ಲೋಬೋ, ದೇಲಿಲಾ ಲೋಬೋ, ರಾಜೇಶ್ ಫಲ್ದೇಸಾಯಿ, ಕೇದಾರ್ ನಾಯ್ಕ್, ಸಂಕಲ್ಪ್ ಅಮೋನ್ಕರ್, ಅಲೆಕ್ಸೋ ಸಿಕ್ವೇರಾ ಮತ್ತು ರುಡಾಲ್ಫ್ ಫೆರ್ನಾಂಡಿಸ್ ಅವರು ಇಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿಯಾದ ಬಳಿಕ ಅಧಿಕೃತವಾಗಿ ಬಿಜೆಪಿ ಸೇರಿದರು.

ಬಳಿಕ ಮಾತನಾಡಿದ ಮಾಜಿ ಕಾಂಗ್ರೆಸ್‌ ಶಾಸಕ ಮೈಕೆಲ್ ಲೋಬೋ, ‘ಪ್ರಧಾನಿ ಮೋದಿ ಮತ್ತು ಸಿಎಂ ಪ್ರಮೋದ್ ಸಾವಂತ್ ಅವರ ಕೈ ಬಲಪಡಿಸಲು ನಾವು 2/3 ಬಹುಮತದೊಂದಿಗೆ ಬಿಜೆಪಿಯೊಂದಿಗೆ ವಿಲೀನಗೊಂಡಿದ್ದೇವೆ ‘ಕಾಂಗ್ರೆಸ್ ಛೋಡೋ, ಬಿಜೆಪಿ ಕೋ ಜೋಡೋ’ ಎಂಬ ಮಾತನ್ನು ಹೇಳಿದರು.

ಇದೇ ವೇಳೆ, ಗೋವಾ ಸಿಎಂ ಸಾವಂತ್ ಕೂಡಾ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ವ್ಯಂಗ್ಯವಾಡಿದರು. ರಾಹುಲ್‌ ಗಾಂಧಿಯನ್ನ ಗೋವಾಕ್ಕೆ ಸ್ವಾಗತಿಸುವಾಗ “ಕಾಂಗ್ರೆಸ್ ಛೋಡೋ ಯಾತ್ರೆ ಈಗ ಇಲ್ಲಿಂದಲೇ ಪ್ರಾರಂಭವಾಗಲಿದೆ” ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಎದುರಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ನಡುವೆ ಈ ಬೆಳವಣಿಗೆ ಸಂಭವಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!