June 15, 2026
Monday, June 15, 2026
spot_img

ತಮಿಳುನಾಡಿನಲ್ಲಿ ಮತ್ತೆ ಜನರ ಮನಸ್ಸು ಗೆದ್ದ ಸಿಎಂ ವಿಜಯ್: ಕುರ್ಚಿ ಮೇಲಿನ ವೈಟ್ ಟವಲ್ ಸಂಸ್ಕೃತಿಗೆ ಹೇಳಿದ್ರು ಗುಡ್ ಬೈ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ವಿಜಯ್ ಅವರು ಈಗಾಗಲೇ ಹೊಸ ಹೊಸ ಯೋಜನೆ, ನಿರ್ಧಾರಗಳ ಮೂಲಕ ಜನತೆಯ ಮೆಚ್ಚುಗೆ ಗಳಿಸುತ್ತಿದ್ದಾರೆ. ಇದೀಗ ಅತ್ಯಂತ ಹಳೆಯ, ಪ್ರತಿಷ್ಠೆಯ ಸಂಕೇತವಾಗಿದ್ದ ಕುರ್ಚಿ ಮೇಲಿನ ವೈಟ್ ಟವಲ್ ಸಂಪ್ರದಾಯಕ್ಕೂ ಗುಡ್ ಬೈ ಹೇಳಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಚಿವರ ಕುರ್ಚಿಗಳಿಗೆ ಬಿಳಿ ಟವಲ್ ಹಾಕುವ ಪದ್ಧತಿ ಸಾಮಾನ್ಯ. ಇದೀಗ ಆ ಹಳೆ ಪದ್ದತಿಗೆ ವಿಜಯ್ ವಿದಾಯ ಹೇಳಿದ್ದು, ಈ ಮೂಲಕ ಜನ ಮೆಚ್ಚುಗೆ ಗಳಿಸಿದ್ದಾರೆ.

ಈ ಕುರಿತು ಪರಿಸರ ಕಾರ್ಯಕರ್ತೆ ಲಿಸಿಪ್ರಿಯಾ ಕಂಗುಜಮ್ ಅವರು ಸಿಎಂ ವಿಜಯ್ ಗೆ ವಿಶೇಷ ಮನವಿ ಮಾಡಿದ್ದರು. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳಿಂದ ಹಿಡಿದು ಪ್ರತಿ ನೌಕರರ ಕುರ್ಚಿಗಳಿಗೆ ಬಿಳಿ ಟವಲ್ ಹಾಕುವ ಸಂಸ್ಕೃತಿ ಇದೆ. ಇದು ವಿಐಪಿ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಹೀಗಾಗಿ ನೀವು ಈ ಸಂಪ್ರದಾಯವನ್ನು ಕೊನೆಗೊಳಿಸಬೇಕು ಎಂದು ಮನವಿ ಮಾಡಿದ್ದರು. ಈ ಬೆನ್ನಲ್ಲೇ ವಿಜಯ್ ಯಾವುದೇ ಅಧಿಕೃತ ಪ್ರಕಟಣೆವಿಲ್ಲದೆ ತೆರವುಗಳಿಸಿದ್ದಾರೆ.

ಮೇ 14ರಂದು ನಡೆದ ಕೈಗಾರಿಕಾ ಇಲಾಖೆಯ ಸಭೆಯಲ್ಲಿ ವಿಜಯ್ ಅವರ ಕುರ್ಚಿಗೆ ಬಿಳಿ ಟವಲ್ ಹಾಕಲಾಗಿತ್ತು. ಶುಕ್ರವಾರ ನಡೆದ TAFE ಮುಖ್ಯಸ್ಥೆ ಜೊತೆಗಿನ ಸಭೆಯ ಫೋಟೋಗಳಲ್ಲಿ ವಿಜಯ್ ಅವರ ಕುರ್ಚಿಯಿಂದ ಟವಲ್ ತೆಗೆದು ಹಾಕಲಾಗಿದೆ. ಈ ಮೂಲಕ ಹೊಸ ಬದಲಾವಣೆಯನ್ನೇ ತಂದಿದ್ದಾರೆ.

ಸಿಎಂ ವಿಜಯ್ ಈ ನಡೆಗೆ ಕಾರ್ಯಕರ್ತೆ ಲಿಸಿಪ್ರಿಯಾ ಕಂಗುಜಮ್ ಅವರು ಕೃತಜ್ಞತೆ ಸಲ್ಲಿಸಿದ್ದು, ವಿಜಯ್ ಅವರು ಜನಸಾಮಾನ್ಯರ ಧ್ವನಿಯನ್ನು ಆಲಿಸುವ ನಾಯಕ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !