ಫೆ.19ರಂದು ‘ಸುಂದರ ಮಲೆನಾಡಿನ ಧೀಮಂತ ಅರಸರು’ ಕಾಫಿ-ಟೇಬಲ್ ಬುಕ್ ಲೋಕಾರ್ಪಣೆ

ಹೊಸದಿಗಂತ ವರದಿ ಶಿವಮೊಗ್ಗ:

ವಿಕ್ರಮ ವಾರಪತ್ರಿಕೆ ವತಿಯಿಂದ ಫೆಬ್ರವರಿ 19 ರಂದು ಸುಂದರ ಮಲೆನಾಡಿನ ಧೀಮಂತ ಅರಸರು-ಕಾಫಿ ಟೇಬಲ್ ಬುಕ್‌ನ ಲೋಪಾರ್ಕಣೆ ನಗರದ ಕರ್ನಾಟಕ ಸಂಘದಲ್ಲಿ ನಡೆಯಲಿದೆ. ಜೊತೆಗೆ ಮಲೆನಾಡಿನ ಅರಸು ಮನೆತನಗಳ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ವಿಕ್ರಮ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ಸು.ನಾಗರಾಜ್ ಬುಧವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ವಿಕ್ರಮ ವಾರಪತ್ರಿಕೆ 75 ವರ್ಷಗಳನ್ನು ಪೂರೈಸುತ್ತಿದೆ.  75 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ ಆಯೋಜಿಸಲಾಗಿದೆ ಎಂದರು.

ಅಂದು ಬೆಳಿಗ್ಗೆ 10 ಕ್ಕೆ ಹಿರಿಯ ಇತಿಹಾಸ ತಜ್ನ ಡಾ.ಕೆಳದಿ ಗುಂಡಾ ಜೋಯಿಸ್ ಅವರು ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ವಿಚಾರ ಸಂಕಿರಣದ ಸರ್ವಾಧ್ಯಕ್ಷತೆಯನ್ನು ಹಂಪಿ ಕನ್ನಡ ವಿವಿ ಶಾಸನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅಮರೇಶ್ ಯತಗಲ್ ವಹಿಸಲಿದ್ದಾರೆ ಎಂದರು.

ಅಂದು ಸಂಜೆ 4.30 ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಸುಂದರ ಮಲೆನಾಡಿನ ಧೀಮಂತ ಅರಸರು-ಕಾಫಿ ಟೇಬಲ್ ಬುಕ್‌ನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಲೋಕಾರ್ಪಣೆ ಮಾಡಲಿದ್ದಾರೆ. ಮಲೆನಾಡಿನ ಅರಸು ಮನೆತನಗಳ ಕುರಿತ ಟೀಸರ್‌ನ್ನು ಸಂಸದ ಬಿ.ವೈಘಿ.ರಾಘವೇಂದ್ರ ಲೋಪಾರ್ಕಣೆ ಮಾಡಲಿದ್ದಾರೆ. ಪ್ರಮುಖ ವಕ್ತಾರರಾಗಿ ಆರ್‌ಎಸ್‌ಎಸ್ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಪಾಲ್ಗೊಳ್ಳುವರು. ಶಾಸಕರಾದ ಹರತಾಳು ಹಾಲಪ್ಪ, ಮಾಡಾಳು ವಿರೂಪಾಕ್ಷಪ್ಪ, ಡಿ.ಎಸ್.ಅರುಣ್, ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ, ಜ್ನಾನ ಭಾರತಿ ಪ್ರಕಾಶನದ ಸಿಇಒ ಪಿ.ಎಸ್.ಪ್ರಕಾಶ್ ಉಪಸ್ಥಿತರಿರುವರು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!