Saturday, December 9, 2023

Latest Posts

ಕಾಫಿ v/s ಚಾಕೋಲೇಟ್ ಇವೆರಡರಲ್ಲಿ ಯಾವುದು ಆರೋಗ್ಯಕರ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಹಳಷ್ಟು ಮಂದಿ ನಮ್ಮ ದಿನವನ್ನು ಒಂದು ಕಪ್ ಕಾಫಿಯೊಂದಿಗೆ ಪ್ರಾರಂಭ ಮಾಡುತ್ತಾರೆ. ಒಂದು ಚಾಕ್ಲೆಟ್‌ ತುಂಡಿನೊಂದಿಗೆ ಕೊನೆಗೊಳಿಸುತ್ತಾರೆ. ಕಾಫಿಯನ್ನು ಸಾಮಾನ್ಯವಾಗಿ ವ್ಯಸನಕಾರಿ ಮತ್ತು ಚಾಕೊಲೇಟ್ ಅನ್ನು ಜಂಕ್ ಫುಡ್ ಎಂದು ವಿವರಿಸಲಾಗಿದೆ. ಆದರೆ ಇವೆರಡೂ ಕೆಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡಾಗ ಎರಡೂ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ.

ಕಾಫಿಯ ಆರೋಗ್ಯ ಪ್ರಯೋಜನಗಳು;

ಕಾಫಿ ಕುಡಿಯುವುದರಿಂದ ಕೆಲವು ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು. ಕಾಫಿಯಲ್ಲಿರುವ ಹೆಚ್ಚಿನ ಕೆಫೀನ್ ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಮಾನಸಿಕ ಕಾರ್ಯಕ್ಷಮತೆಯ ಜೊತೆಗೆ, ಕಾಫಿ ಮೆದುಳಿನ ಕಾರ್ಯ ಮತ್ತು ಇತರ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಕಾಫಿಯಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್, ಮ್ಯಾಂಗನೀಸ್, ಪೊಟ್ಯಾಸಿಯಮ್ ಇದೆ. ಯಕೃತ್ತಿನ ಹಾನಿಯನ್ನು ತಡೆಯಲು ಕಾಫಿ ಸಹಾಯ ಮಾಡುತ್ತದೆ. ಕಾಫಿಯಲ್ಲಿರುವ ಪಾಲಿಫಿನಾಲ್ಗಳು ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ.

ಚಾಕೊಲೇಟ್‌ನ ಆರೋಗ್ಯ ಪ್ರಯೋಜನಗಳು; 

ಡಾರ್ಕ್ ಚಾಕೊಲೇಟ್ ಫೈಬರ್, ಕಬ್ಬಿಣ, ಮೆಗ್ನೀಸಿಯಮ್, ತಾಮ್ರ, ಮ್ಯಾಂಗನೀಸ್ ಮತ್ತು ಇತರ ಕೆಲವು ಖನಿಜಗಳಲ್ಲಿ ಸಮೃದ್ಧವಾಗಿದೆ. ಇದೆಲ್ಲದರ ಹೊರತಾಗಿಯೂ, ಚಾಕೊಲೇಟ್‌ನಲ್ಲಿರುವ ಹೆಚ್ಚಿನ ಪ್ರಮಾಣದ ಸಕ್ಕರೆ, ಕೆನೆ, ಸಂಸ್ಕರಿಸಿದ ಹಿಟ್ಟು ಮತ್ತು ಕೊಬ್ಬು ಆರೋಗ್ಯದ ಮೇಲೆ ಕೆಲ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ. ಸರಿಯಾದ ಕ್ರಮದಲ್ಲಿ ಚಾಕಲೇಟ್ ತಿನ್ನುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಇನ್ಸುಲಿನ್ ಸೆನ್ಸಿಟಿವಿಟಿ ಹೆಚ್ಚುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಕಾಫಿಯಂತೆ, ಚಾಕೊಲೇಟ್ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.

ಚಾಕೊಲೇಟ್ ಅಪಧಮನಿಗಳಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಹೃದಯಾಘಾತವನ್ನು ತಡೆಯುತ್ತದೆ. ಮೆದುಳಿನಲ್ಲಿ ನಿಯಮಿತವಾಗಿ ರಕ್ತದ ಹರಿವನ್ನು ಖಚಿತಪಡಿಸುತ್ತದೆ. ಡಾರ್ಕ್ ಚಾಕೊಲೇಟ್‌ನಲ್ಲಿರುವ ಫ್ಲೇವನಾಯ್ಡ್‌ಗಳು ಚರ್ಮಕ್ಕೆ ರಕ್ತ ಪರಿಚಲನೆ ಸುಧಾರಿಸುವುದು ಮತ್ತು ಸೂರ್ಯನ ಹಾನಿಯಿಂದ ಚರ್ಮವನ್ನು ರಕ್ಷಿಸುವಂತಹ ಪ್ರಯೋಜನಗಳನ್ನು ಹೊಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!