ನಾನು ಬಂದ್ರೆ ದಾರಿ ಬಿಡ್ಲೇಬೇಕು! ಹುಲಿಯ ಗತ್ತೇ ಗಮ್ಮತ್ತು, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಡಿನ ರಸ್ತೆಯಲ್ಲಿ ಸಂಚರಿಸುವಾಗ ವನ್ಯಪ್ರಾಣಿಗಳು ಆಗಾಗ ವಾಹನ ಸವಾರರನ್ನು ಆಕರ್ಷಿಸುತ್ತವೆ. ಕೆಲವನ್ನು ಕಂಡರೆ ಕ್ಯೂಟ್‌ ಅನಿಸುತ್ತೆ, ದೈತ್ಯ ಗಾತ್ರದ ಪ್ರಾಣಿಗಳನ್ನು ನೋಡಿದರೆ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಹಾಗಾಗಿ ಕಾಡಿನ ಮೂಲಕ ಹಾದುಹೋಗು ವಾಹನ ಸವಾರರು ಬಹಳ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು.

ವೈರಲ್‌ ಆಗಿರುವ ವಿಡಿಯೋದಲ್ಲಿ ಹುಲಿರಾಯ ತನ್ನ ಗತ್ತು ಗಾಂಭೀರ್ಯದಿಂದ ರಸ್ತೆ ಮಧ್ಯೆ ಹೆಜ್ಜೆ ಹಾಕುತ್ತಿದ್ದರೆ ವಾಹನ ಸವಾರರು ಹುಲಿಗೆ ದಾರಿ ಬಿಟ್ಟು ರಸ್ತೆ ಆಚೆ ಬದಿ, ಈಚೆ ಬದಿ ನಿಂತಿದ್ದಾರೆ. ಈ ವಿಡಿಯೋ ಸಖತ್‌ ವೈರಲ್‌ ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಒಂದು ಹುಲಿಯನ್ನು ನೋಡಲು ನಾವು ಸಫಾರಿಯಲ್ಲಿ ದಟ್ಟವಾದ ಕಾಡಿನಲ್ಲಿ ಅಲೆದಾಡುತ್ತೇವೆ. ಹುಲಿ ಕಾಣದೆ ಬಂದ ದಾಋಇಗೆ ಸುಂಕವಿಲ್ಲವೆಂಬಂತೆ, ವಾಪಸಾಗುತ್ತೇವೆ. ಇಲ್ಲಿ ನೋಡಿದ್ರೆ  ಈ ಮೃಗವು ಹೆದ್ದಾರಿಯನ್ನು ಸುಲಭವಾಗಿ ದಾಟುತ್ತಿರುಬುದು ಖುಷಿ ತಂದಿದೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವಿಐಪಿಗಳು ಬಂದಾಗ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಡೆದು ನಿಲ್ಲಿಸುವ ಹಾಗೆ ಹುಲಿಗಾಗಿ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!