ಹಿಮಾಚಲ, ಕೀಲಾಂಗ್‌, ಲಾಹೌಲ್-ಸ್ಪಿಟಿಯಲ್ಲಿ ಶೀತದ ಅಲೆ: 11 ಡಿಗ್ರಿ ತಾಪಮಾನ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನರ್ಕಂಡ, ಕುಫ್ರಿ ಮತ್ತು ಚಂಬಾ ಸೇರಿದಂತೆ ಹಿಮಾಚಲ ಪ್ರದೇಶದ ಹೆಚ್ಚಿನ ಭಾಗಗಳಲ್ಲಿ ಶೀತದ ಅಲೆಗಳು ಹೆಚ್ಚಾಗಿದೆ. ರಾಜ್ಯದ ಹಲವಾರು ಭಾಗಗಳಲ್ಲಿ ಭಾರೀ ಹಿಮಪಾತವಾಗಿದ್ದು,  ಕುಫ್ರಿಯಲ್ಲಿ ರಸ್ತೆಗಳು ಮುಚ್ಚಿವೆ. ಕುಫ್ರಿ ಬುಧವಾರ -0.3 ಡಿಗ್ರಿ ಸೆಲ್ಸಿಯಸ್‌ ದಾಖಲಾದರೆ, ಶಿಮ್ಲಾದ ನರಕಂಡದಲ್ಲಿ -2.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಚಂಬಾ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣವಾದ ಡಾಲ್‌ಹೌಸಿ ಕೂಡ 1.7 ಡಿಗ್ರಿ ಸೆಲ್ಸಿಯಸ್‌ನಲ್ಲಿ ಹಿಮಾವೃತ ಚಳಿಯ ಹಿಡಿತದಲ್ಲಿದೆ. ಕೊರೆಯುವ ಚಳಿಯಲ್ಲಿ ಸ್ಥಳೀಯರು ಅದರಲ್ಲೂ ಕೂಲಿಕಾರ್ಮಿಕರು ತಮ್ಮ ಕೆಲಸಗಳಿಗೆ ತೆರಳಲು ಪರದಾಡುವಂತಾಗಿತ್ತು.
ಕಳೆದ 24 ಗಂಟೆಗಳಲ್ಲಿ, ಲಾಹೌಲ್-ಸ್ಪಿಟಿ ಜಿಲ್ಲೆಯ ಕೀಲಾಂಗ್ ರಾಜ್ಯದಲ್ಲಿ ಅತ್ಯಂತ ಕಡಿಮೆ ತಾಪಮಾನವನ್ನು -11 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಿಸಿದರೆ, ಅದೇ ಜಿಲ್ಲೆಯ ಕುಕುಮ್‌ಸೇರಿಯಲ್ಲಿ -10 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇದೆ.

ಕಿನ್ನೌರ್ ಜಿಲ್ಲೆಯ ಕಲ್ಪಾ -4.2 ಡಿಗ್ರಿ ಸೆಲ್ಸಿಯಸ್‌, ಮನಾಲಿ -2.2 ಡಿಗ್ರಿ ಸೆಲ್ಸಿಯಸ್‌, ಧರ್ಮಶಾಲಾದಲ್ಲಿ ಕನಿಷ್ಠ ತಾಪಮಾನ 5.2 ಡಿಗ್ರಿ ಸೆಲ್ಸಿಯಸ್, ರಾಜ್ಯದ ರಾಜಧಾನಿ ಶಿಮ್ಲಾದಲ್ಲಿ 1.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಪ್ರವಾಸೋದ್ಯಮ ನಿರ್ವಾಹಕರು  ಶೀತದ ಅಲೆಯಿಂದ ತೀವ್ರವಾಗಿ ತತ್ತರಿಸಿದ್ದಾರೆ, ಏಕೆಂದರೆ ಹಲವಾರು ಪ್ರವಾಸಿಗರು ಬೆಚ್ಚಗಿರುವ ಇತರ ಸ್ಥಳಗಳಿಗೆ ತೆರಳುತ್ತಿದ್ದಾರೆ. ಈ ಚಳಿಯಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದವರಿಗೆ ಯಾವುದೇ ಉದ್ಯೋಗಗಳಿಲ್ಲದಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!