ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಫ್ಯಾನ್ಸ್‌ಗೆ ಬಿಗ್ ಅಪ್ಡೇಟ್ ಸಿಕ್ಕಿದೆ! ‘ಮೈಸಾ’ ಸಿನಿಮಾದ ಶೂಟಿಂಗ್ ನಡೆಸುವಾಗ ರಶ್ಮಿಕಾ ಸೊಂಟದ ಭಾಗಕ್ಕೆ ಏಟು ಮಾಡಿಕೊಂಡು ರೆಸ್ಟ್ ತಗೋತಿದ್ರು, ಈಗ ಕಂಪ್ಲೀಟ್ ಚೇತರಿಸಿಕೊಂಡು ಮತ್ತೆ ಕ್ಯಾಮೆರಾ ಮುಂದೆ ಬರೋಕೆ ರೆಡಿಯಾಗಿದ್ದಾರೆ.
ಏಟಾದ ಮೇಲೆ ಸುಮಾರು ಒಂದು ತಿಂಗಳು ಮನೆಯಲ್ಲೇ ರೆಸ್ಟ್‌ನಲ್ಲಿದ್ದ ರಶ್ಮಿಕಾ, ಆ ಟೈಮ್ ಅನ್ನು ಫ್ಯಾಮಿಲಿ ಜೊತೆ ಸಖತ್ ಆಗಿ ಎಂಜಾಯ್ ಮಾಡಿದ್ದಾರೆ. ಮನೆಯಲ್ಲಿ ಪೂಜೆ ಮಾಡೋದು, ತಮ್ಮ ಮುದ್ದು ನಾಯಿ ಜೊತೆ ಆಟಾಡೋದು, ಜಿಗ್ಸಾ ಪಝಲ್ ಬಿಡಿಸೋದು ಮತ್ತೆ ಗಾರ್ಡನ್‌ನಲ್ಲಿ ಕೂತು ರಿಲ್ಯಾಕ್ಸ್ ಆಗೋದ್ರಲ್ಲಿ ಬ್ಯುಸಿಯಾಗಿದ್ರು. ಇದರ ಫೋಟೋಗಳನ್ನೆಲ್ಲಾ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ, “ಮತ್ತೆ ಕೆಲಸಕ್ಕೆ ಹಾಜರ್ ಆಗ್ತಿದ್ದೀನಿ, ಬಟ್ ಮನೆಯಲ್ಲಿದ್ದ ಈ ದಿನಗಳನ್ನು ನಿಜಕ್ಕೂ ಮಿಸ್ ಮಾಡ್ಕೋತೀನಿ” ಅಂತ ಬರೆದುಕೊಂಡಿದ್ದಾರೆ.
https://www.instagram.com/p/DcqkAv3DChS/?utm_source=ig_web_button_share_sheet
ಆಗಸ್ಟ್ ಆರಂಭದಲ್ಲೇ ತಮ್ಮ ಹೆಲ್ತ್ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದ ರಶ್ಮಿಕಾ, ‘ಮೈಸಾ’ ನನ್ನ ಕೆರಿಯರ್‌ನಲ್ಲೇ ಅತ್ಯಂತ ರಫ್ ಅಂಡ್ ಟಫ್ ಸಿನಿಮಾ. ಏಟಾಗಿದ್ದು ನೋವಾಯ್ತು ನಿಜ, ಆದ್ರೆ ತಡೆಯೋಕೆ ಆಗಲ್ಲ ಅನ್ನೋ ಅಷ್ಟೇನೂ ಇಲ್ಲ. ‘ನೀನಾಗಿಯೇ ಬ್ರೇಕ್ ತಗೋಳಲ್ಲ, ತಗೋ ನಾನೇ ಕೊಡ್ತೀನಿ’ ಅಂತ ದೇವನೇ ಈ ಫ್ರೀ ಟೈಮ್ ಕೊಟ್ಟಂಗೆ ಆಯ್ತು ಅಂತ ತಮಾಷೆಯಾಗಿ ಹೇಳಿಕೊಂಡಿದ್ರು. ಈಗ ರಶ್ಮಿಕಾ ಕಮ್‌ಬ್ಯಾಕ್ ಸುದ್ದಿ ಕೇಳಿ ಅವರ ಅಭಿಮಾನಿಗಳು ಖುಷಿಯಲ್ಲಿದ್ದಾರೆ.
ಒಟ್ಟಿನಲ್ಲಿ ನೋವೆಲ್ಲಾ ಮಾಯವಾಗಿ, ರಶ್ಮಿಕಾ ಮತ್ತೆ ಫುಲ್ ಎನರ್ಜಿಯಿಂದ ಶೂಟಿಂಗ್ ಅಖಾಡಕ್ಕೆ ಇಳಿಯೋಕೆ ರೆಡಿಯಾಗಿದ್ದಾರೆ.



