ಅಮೆರಿಕ ಗಪ್‌ಚುಪ್: ರಷ್ಯಾದಿಂದ ತೈಲ ಖರೀದಿಸುವ ಭಾರತಕ್ಕೆ ನಮ್ಮ ಅಭ್ಯಂತರವಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಕ್ರೇನ್-ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ಮೇಲೆ ಹಲವು ನಿರ್ಬಂಧಗಳನ್ನು ಹೇರಿರುವ ಅಮೆರಿಕ, ಆ ದೇಶದಿಂದ ಭಾರತ ತೈಲ ಖರೀದಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ ಅಮೆರಿಕದ ಬೆದರಿಕೆಗೆ ಬಗ್ಗದ ಭಾರತ ದಿಟ್ಟ ಉತ್ತರ ನೀಡಿದೆ. ರಷ್ಯಾದಿಂದ ಇಂಧನ ಖರೀದಿಸುವ ನಿರ್ಧಾರ ಬದಲಾಗುವುದಿಲ್ಲ, ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಕೇಂದ್ರ ಪ್ರತ್ಯುತ್ತರ ಕೊಟ್ಟಿತ್ತು. ಎಲ್ಲಾ ಪ್ರಯತ್ನಗಳನ್ನು ಮಾಡಿದ ನಂತರ ಭಾರತವನ್ನು ಬಗ್ಗಿಸಲು ಸಾಧ್ಯವಿಲ್ಲ ಅರಿತ ಅಮೆರಿಕ ಕೊನೆಗೂ ಸೈಲೆಂಟ್‌ ಆಗಿದೆ. ರಷ್ಯಾದಿಂದ ಭಾರತ ತೈಲ ಖರೀದಿಗೆ ನಮ್ಮ ಅಭ್ಯಂತರವಿಲ್ಲ ಮತ್ತು ಭಾರತದ ಮೇಲೆ ನಿರ್ಬಂಧಗಳನ್ನು ಹೇರಲು ಅಮೆರಿಕ ನೋಡುತ್ತಿಲ್ಲ ಎಂದು ಯುರೋಪಿಯನ್-ಯುರೇಷಿಯನ್ ವ್ಯವಹಾರಗಳ ಯುಎಸ್ ಸಹಾಯಕ ಕಾರ್ಯದರ್ಶಿ ಕರೆನ್ ಡ್ಯಾನ್‌ಫ್ರೈಡ್ ಸ್ಪಷ್ಟಪಡಿಸಿದ್ದಾರೆ.

ಭಾರತದೊಂದಿಗಿನ ಸಂಬಂಧಗಳು ಬಹಳ ಪರಿಣಾಮ ಬೀರುತ್ತವೆ. ಯುಎಸ್ ಮತ್ತು ಭಾರತವು ವಿಭಿನ್ನ ನೀತಿಗಳನ್ನು ಹೊಂದಿರಬಹುದು, ಆದರೆ ಎರಡೂ ದೇಶಗಳು ಅಂತರರಾಷ್ಟ್ರೀಯ ನಿಯಮಗಳನ್ನು ಮತ್ತು ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಗೆ ಪರಸ್ಪರ ಗೌರವಿಸುವ ಬದ್ಧತೆ ಇದೆ ಎಂದರು. ರಷ್ಯಾದಿಂದ ಭಾರತ ತೈಲ ಖರೀದಿಯನ್ನು ಯುಎಸ್ ನೀತಿಯೊಂದಿಗೆ “ಆರಾಮದಾಯಕ” ಎಂದು  ಯುಎಸ್ ಎನರ್ಜಿ ರಿಸೋರ್ಸಸ್ ಸಹಾಯಕ ಕಾರ್ಯದರ್ಶಿ ಜೆಫ್ರಿ ಪೇಟ್ ಹೇಳಿದರು.

ಹಿರಿಯ US ರಾಜತಾಂತ್ರಿಕರು ರಷ್ಯಾದ ತೈಲ ಬೆಲೆಯ ಮಿತಿಯನ್ನು ಸಮರ್ಥಿಸುತ್ತಾರೆ. ಆದರೆ ಭಾರತ ಭಾಗಿಯಾಗದಿದ್ದರೂ, ಉತ್ತಮ ಬೆಲೆಗೆ ಮಾತುಕತೆ ನಡೆಸಲು ಇದು ಅವಕಾಶವಾಗಿದೆ ಎಂದು ಪ್ಯಾಟ್ ಹೇಳಿದರು. ಉಕ್ರೇನ್‌ನಲ್ಲಿ ಯುದ್ಧವನ್ನು ಉತ್ತೇಜಿಸುವ ರಷ್ಯಾದ ಆದಾಯವನ್ನು ಕಡಿಮೆ ಮಾಡುವುದು ಬೆಲೆ ಮಿತಿಯ ಕಲ್ಪನೆಯನ್ನು ಅಮೆರಿಕ ನಿರ್ಧರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!