ಕೋಟ್ಯಾಂತರ ರೂ.ಲೂಟಿ ಪ್ರಕರಣ: ಹಗರಣ ಬಯಲಿಗೆ ತಂದ ಅಧಿಕಾರಿಯೇ ಎತ್ತಂಗಡಿ!

ಹೊಸದಿಗಂತ ವರದಿ, ಕಲಬುರಗಿ:

ಇತ್ತೀಚಿಗೆ ಕಲಬುರಗಿಯ ಕಮರ್ಷಿಯಲ್ ಟ್ಯಾಕ್ಸ್ ಕಚೇರಿಯಲ್ಲಿ ನಡೆದಿದ ಕೋಟ್ಯಾಂತರ ರೂಪಾಯಿ ಲೂಟಿ ಪ್ರಕರಣ ಬೆಳಕಿಗೆ ಬಂದಿತ್ತು, ಹಗರಣ ಬಯಲಿಗೆ ತಂದಿದ ಜಂಟಿ ಆಯುಕ್ತರ ಸಂಗಪ್ಪ ಉಪಾಸೆ ಅವರನ್ನೆ ಈಗ ಎತ್ತಂಗಡಿ ಮಾಡಲಾಗಿದೆ.

ಕಮರ್ಷಿಯಲ್ ಟ್ಯಾಕ್ಸ್ ಕಚೇರಿಯ ಕೋಟಿ ಕೋಟಿ ಹಣ ಲೂಟಿ ಮಾಡಿರುವ ಪ್ರಕರಣವು, ತನಿಖಾ ಹಂತದಲ್ಲಿ ಇರುವಾಗಲೇ ಜಂಟಿ ಆಯುಕ್ತರನ್ನು ವರ್ಗಾವಣೆ ಮಾಡಿರುವುದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಒತ್ತಡದಿಂದ ಜಂಟಿ ಆಯುಕ್ತರ ವರ್ಗಾವಣೆ ಮಾಡಲಾಗಿದೆ ಎಂದು ಹೇಳಾಗುತ್ತಿದು, ಪ್ರಕರಣವನ್ನ ಸಂಪೂರ್ಣವಾಗಿ ಮುಚ್ಚಿಹಾಕೋದಕ್ಕೆ ಇಲಾಖೆ ಅಧಿಕಾರಿಗಳೇ ಮುಂದಾಗಿದ್ದಾರೆ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಸಂಗಪ್ಪ ಉಪಾಸೆ ಅವರನ್ನು ಆರು ತಿಂಗಳ ಅವಧಿಗೆ ವರ್ಗಾವಣೆ ಮಾಡಿ, ಬೆಂಗಳೂರು ಕೇಂದ್ರ ಕಚೇರಿಯ ಕಾನೂನು ವ್ಯವಹಾರಗಳ ಜಂಟಿ ಆಯುಕ್ತರ ಹುದ್ದೆಗೆ ನಿಯೋಜನೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಅವರ ಸ್ಥಾನಕ್ಕೆ ಸಿ. ಎಸ್. ನಾರಾಯಣ ಅವರನ್ನು ವರ್ಗಾವಣೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!