ಸೆಕೆಂಡ್ ಹ್ಯಾಂಡ್ ಬಟ್ಟೆ, ಬೂಟುಗಳ ಮಾರುತ್ತಿರುವ ಪಾಕ್ ಮಾಜಿ ಅಂಪೈರ್ !

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ಕಾಲದಲ್ಲಿ ಐಸಿಸಿ ಎಲೈಟ್ ಪ್ಯಾನೆಲ್​ನಲ್ಲಿ ಅಂಪೈರ್ ಆಗಿದ್ದ ಪಾಕಿಸ್ತಾನಿ ಆಟಗಾರ ಅಸದ್ ರೌಫ್ ಪ್ರಸ್ತುತ ಸೆಕೆಂಡ್ ಹ್ಯಾಂಡ್ ಬಟ್ಟೆ, ಬೂಟುಗಳು ಮತ್ತು ಹೊಟ್ಟೆಗಾಗಿ ಇತರ ವಸ್ತುಗಳನ್ನು ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ.
ಲಾಹೋರ್​ನ ಲಾಂಡಾ ಬಜಾರ್​ನಲ್ಲಿ ಅಂಗಡಿಯೊಂದನ್ನು ನಡೆಸುತ್ತಿರುವ ಅಸಾದ್ (66) ಅವರನ್ನು ಸ್ಥಳೀಯ ಮಾಧ್ಯಮಗಳು ಸಂಪರ್ಕಿಸಿದ್ದು, ತಮ್ಮ ಜೀವನದಲ್ಲಿ ಯಾವುದರ ಬಗ್ಗೆಯೂ ಪಶ್ಚಾತ್ತಾಪವಿಲ್ಲ. ನಾನು ಮಾಡುತ್ತಿರುವ ಕೆಲಸ ತೃಪ್ತಿ ತಂದಿದೆ ಎಂದರು. ತನಗೆ ದುರಾಸೆ ಇಲ್ಲ, ಎಷ್ಟು ಸಾಧ್ಯವೋ ಅಲ್ಲಿಯವರೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

2000-2013ರ ಅವಧಿಯಲ್ಲಿ 98 ODIಗಳು, 49 ಟೆಸ್ಟ್​​ಗಳು ಮತ್ತು 23 T20I ಪಂದ್ಯಗಳನ್ನು ಅಂಪೈರ್ ಮಾಡಿದ ಅಸದ್ ರವೂಫ್, IPL-2013 ಸಮಯದಲ್ಲಿ ಬುಕ್ಕಿಗಳಿಂದ ದುಬಾರಿ ಬಹುಮಾನಗಳನ್ನು ಸ್ವೀಕರಿಸಿದ ಆರೋಪದ ಮೇಲೆ ನಿಷೇಧಕ್ಕೊಳಗಾಗಿದ್ದರು. ಆ ನಂತರ ಅವರು ಸಂಪೂರ್ಣವಾಗಿ ಆಟದಿಂದ ಹೊರಗುಳಿದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!