ಪಕ್ಷ ಜವಾಬ್ದಾರಿ ಕೊಟ್ಟರೆ ನಿಭಾಯಿಸಲು ಬದ್ಧ: ಸಚಿವ ಸುನೀಲ್ ಕುಮಾರ್

ಹೊಸದಿಗಂತ ವರದಿ, ಕಲಬುರಗಿ:

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುವುದಕ್ಕೆ ನನ್ನಂತಹ ಹತ್ತಾರು ಜನರಿಗೆ ಯೋಗ್ಯತೆ ಮತ್ತು ಅಹ೯ತೆ ಇದೆ.ಹೀಗಾಗಿ ಪಕ್ಷ ಜವಾಬ್ದಾರಿ ಕೊಟ್ಟರೆ ನಿಭಾಯಿಸಲು ಬದ್ಧವಾಗಿದ್ದೇನೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನೊಬ್ಬ ಪಕ್ಷದ ಸಾಮಾನ್ಯ ಕಾಯ೯ಕತ೯.ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ನನಗೆ ಗೊತ್ತಿರಲಿಲ್ಲ. ನಮ್ಮ ಹಿರಿಯರು ನನಗೆ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಚುನಾವಣೆಗೆ ನಿಂತಿದ್ದೆ ಎಂದರು.

ಇಂದಿನ ಸಮಯದಲ್ಲಿ ಯಾರಾದರೂ ಪಕ್ಷವನ್ನು ಮುನ್ನೆಡೆಸುವಂತೆ ಯೋಗ್ಯತೆ ಇವತ್ತಿನ ಯುವ ಸಮೂಹಕ್ಕೆ ಇದ್ದೆ ಇದೆ.ಪಕ್ಷ ಜವಾಬ್ದಾರಿ ನೀಡಿದ್ದಲ್ಲಿ,ಪ್ರಾಮಾಣಿಕವಾಗಿ ನಿಭಾಸುವುದರಲ್ಲಿ ಎರಡು ಮಾತಿಲ್ಲ ಎಂದರು.

ಇವತ್ತು ತಕ್ಷಣ ಬದಲಾವಣೆ ಆಗುತ್ತದೆ ಎಂದು ನನಗೇನು ಅನಿಸುತ್ತಿಲ್ಲ.ನಮಗೆ ಈಗಿರುವ ಗುರಿ ಮುಂದಿನ ಚುನಾವಣೆಯಲ್ಲಿ 130 ರಿಂದ 150 ಸ್ಥಾನ ಗೆಲ್ಲುವುದಾಗಿದೆ.ಗೆಲ್ಲಲು ಬೇಕಾದಂತಹ ಕಾಯ೯ತಂತ್ರ ಮಾಡುತ್ತಿದ್ದೇವೆ ಎಂದರು.

ಸಿದ್ದರಾಮಯ್ಯ ಮಾಂಸ ತಿಂದು ಕೃಷ್ಣ ಮಂದಿರಕ್ಕೆ ಭೇಟಿ ನೀಡಿದ ವಿಚಾರವಾಗಿ ಮಾತನಾಡಿದ ಅವರು, ಯುವ ರಾಜಕಾರಣಿಗಳಿಗೆ ಆದಶ೯ವಾಗುವಂತಹ ಯಾವ ಗುಣಗಳು ಸಹ ಸಿದ್ದರಾಮಯ್ಯ ಬಳಿ ಇಲ್ಲ.ಅವರ ನಡುವಳಿಕೆ ಮತ್ತು ಅವರ ಹೇಳಿಕೆಗಳಲ್ಲಿ ಒಬ್ಬ ಮುತ್ಸದ್ದಿ ರಾಜಕಾರಣಿ ಎನ್ನುವಂತಹ ಯಾವುದೇ ಲಕ್ಷಣಗಳು ಇಲ್ಲ ಎಂದರು.

ಸಿದ್ದರಾಮಯ್ಯ ಅವರ ಹತ್ತಿರ ನೋಡಿ ಕಲಿಯುವುದು ಎನಿದೆ ಎಂದು ಪ್ರಶ್ನಿಸಿದರು. ಪ್ರತಿ ಸಾರಿ ಸುಳ್ಳು ಮಾತನಾಡುತ್ತಾರೆ.ಪ್ರತಿ ಬಾರಿ ಸಮಾಜಕ್ಕೆ ವಿರುದ್ಧ ಹೇಳಿಕೆ ನೀಡುತ್ತಾರೆ. ಸಮಾಜದ ನಡುವೆ ಜಾತಿಯ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಾರೆ ಎಂದ ಅವರು, ಅವರಿಂದ ಕಲಿತುಕೊಳ್ಳುವಂತಹ ಯಾವುದು ಕೂಡ ಇವತ್ತಿನ ಯುವ ರಾಜಕಾರಣಿಗಳಿಗೆ ಇಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಹೇಳಿಕೆ ಮತ್ತು ವತ೯ನೆ ನೋಡಿ,ಇಡೀ ರಾಜ್ಯದ ಯುವ ಸಮುದಾಯ ಅವರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದರು.

ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುವುದು ತಪ್ಪು ಎಂದು ನಾನೆಲ್ಲೂ ಹೇಳುತ್ತಿಲ್ಲ. ದೇವಸ್ಥಾನಗಳಿಗೆ ಹೇಗೆ ಹೋಗಬೇಕು ಎನ್ನುವುದು ಕೆಲವರ ಭಾವನೆಗೆ ಸಂಬಂಧ ಪಟ್ಟ ವಿಚಾರವಾಗಿದೆ. ಅವರವರ ಭಾವನೆಗೆ ತಕ್ಕಂತೆ ಅವರವರು ನಡೆದುಕೊಳ್ಳುತ್ತಾರೆ ಎಂದರು. ಸಿದ್ದರಾಮಯ್ಯ ಅವರಿಗೆ ಯಾವ ಭಾವನೆ ಇದೆ ನನಗೆ ಗೊತ್ತಿಲ್ಲ. ಆದರೆ ಅವರು ಒಳಗೊಂದು,ಹೊರಗೊಂದು ಮಾತನಾಡುತ್ತಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!