Thursday, August 18, 2022

Latest Posts

ಕಾಮನ್​ವೆಲ್ತ್​ ನಲ್ಲಿ ಕ್ರಿಕೆಟ್: ಆಸ್ಟ್ರೇಲಿಯಾ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಟೀಂ ಇಂಡಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಬರೋಬ್ಬರಿ 24 ವರ್ಷಗಳ ಬಳಿಕ ಕಾಮನ್​ವೆಲ್ತ್​ ಗೆಮ್ಸ್​​ನಲ್ಲಿ ಕ್ರಿಕೆಟ್ ಮರುಸೇರ್ಪಡೆಯಾಗಿದ್ದು, ಇಂದಿನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಮಹಿಳಾ ಪಡೆ ಕಣಕ್ಕಿಳಿದಿದ್ದು, ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.

ಬರ್ಮಿಂಗ್​ಹ್ಯಾಮ್​​ನ ಎಡ್ಜ್​ಬಾಸ್ಟನ್​ ಮೈದಾನದಲ್ಲಿ ಉಭಯ ತಂಡಗಳ ಮಧ್ಯೆ ಮೊದಲ ಪಂದ್ಯ ಆರಂಭಗೊಂಡಿದ್ದು, ಹರ್ಮಿನ್ ಪ್ರೀತ್ ಕೌರ್ ಬಳಗ ಗೆಲುವಿನೊಂದಿಗೆ ಶುಭಾರಂಭ ಮಾಡುವ ಇರಾದೆಯಲ್ಲಿದೆ.

ಟೀಂ ಇಂಡಿಯಾ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿ.ಕೀ), ಜೆಮಿಮಾ ರೊಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ಕ್ಯಾಪ್ಟನ್​), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಮೇಘನಾ ಸಿಂಗ್, ರೇಣುಕಾ ಸಿಂಗ್

ಆಸ್ಟ್ರೇಲಿಯಾ ತಂಡ: ಅಲಿಸ್ಸಾ ಹೀಲಿ (ವಿ.ಕೀ), ಬೆತ್ ಮೂನಿ, ಮೆಗ್ ಲ್ಯಾನಿಂಗ್ (ಕ್ಯಾಪ್ಟನ್​), ತಹ್ಲಿಯಾ ಮೆಕ್‌ಗ್ರಾತ್, ರಾಚೆಲ್ ಹೇನ್ಸ್, ಆಶ್ಲೀ ಗಾರ್ಡ್ನರ್, ಗ್ರೇಸ್ ಹ್ಯಾರಿಸ್, ಜೆಸ್ ಜೊನಾಸೆನ್, ಅಲಾನಾ ಕಿಂಗ್, ಮೇಗನ್ ಶುಟ್, ಡಾರ್ಸಿ ಬ್ರೌನ್

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!