Saturday, March 25, 2023

Latest Posts

ಆಯೋಗಕ್ಕೆ ತಪ್ಪು ಮಾಹಿತಿ ಸಲ್ಲಿಕೆ ಆರೋಪ : ಶಾಸಕ ಕೆ. ಜಿ. ಬೋಪಯ್ಯ ವಿರುದ್ಧ ದೂರು

ಹೊಸದಿಗಂತ ವರದಿ ಮಡಿಕೇರಿ :

ವೀರಾಜಪೇಟೆ ಕ್ಷೇತ್ರದ ಹಾಲಿ ಶಾಸಕ ಕೆ. ಜಿ. ಬೋಪಯ್ಯ ಅವರು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ವ್ಯಕ್ತಿಯೊಬ್ಬರು ವೀರಾಜಪೇಟೆ ನಗರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ತಮ್ಮ ವಯಸ್ಸನ್ನು ತಿದ್ದಿ ತಪ್ಪು ಮಾಹಿತಿ ನೀಡುವುದರೊಂದಿಗೆ ಬೋಪಯ್ಯ ಅವರು ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾ ನೀತಿಯನ್ವಯ ಇದು ಗಂಭೀರ ಅಪರಾಧವಾಗಿದೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ‌ ಕ್ರಮ ಕೈಗೊಳ್ಳಬೇಕು ಎಂದು ಪಿ. ಬಿ. ತಿಮ್ಮಯ್ಯ ಎಂಬವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ವೀರಾಜಪೇಟೆ ಕ್ಷೇತ್ರದ ವಿಧಾನ ಸಭಾ ಸದಸ್ಯರಾದ ಕೆ. ಜಿ. ಬೋಪಯ್ಯ ಎಂಬವರು 26.10.1979 ರಲ್ಲಿ ಬಾರ್ ಕೌನ್ಸಿಲ್’ನಲ್ಲಿ ವಕೀಲರಾಗಿದ್ದು, ಅವರು ಆಗ ತಮ್ಮ ಹುಟ್ಟಿದ ದಿನಾಂಕವನ್ನು 1951 ಅಕ್ಟೋಬರ್ 17 ಎಂದು ದಾಖಲಿಸಿರುತ್ತಾರೆ. ಆದರೆ ಅವರ ಜನ್ಮ ದಿನಾಂಕಕ್ಕೆ ಅನುಗುಣವಾಗಿ 2004ನೇ ಸಾಲಿನ ಚುನಾವಣೆ ಸಮಯದಲ್ಲಿ ಅವರ ವಯಸ್ಸು 53 ವರ್ಷ ಆಗಿದ್ದರೂ, ತಮ್ಮ ವಯಸ್ಸನ್ನು ಬೋಪಯ್ಯ 49 ವರ್ಷ ಎಂದು ದಾಖಲಿಸಿದ್ದಾರೆ. ಅಲ್ಲದೆ 2013ನೇ ಸಾಲಿನ ಚುನಾವಣೆಯಲ್ಲಿ ಅವರ ವಯಸ್ಸು 61 ವರ್ಷ ಆಗಿದ್ದು, ಅವರು ಚುನಾವಣೆ ಆಯೋಗಕ್ಕೆ ಅವರ ವಯಸ್ಸನ್ನು 58 ವರ್ಷ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಅದು ಅಲ್ಲದೆ 2018ರ ಚುನಾವಣೆಯಲ್ಲಿ ಅವರ ವಯಸ್ಸು ಅವರ ಜನ್ಮ ದಿನಾಂಕಕ್ಕೆ ಅನುಗುಣವಾಗಿ 67 ಆಗಿದೆ, ಆದರೆ ಚುನಾವಣೆ ಆಯೋಗಕ್ಕೆ ಬೋಪಯ್ಯ ಅವರಯ ತಮ್ಮ ವಯಸ್ಸನ್ನು 65 ಎಂದು ಸುಳ್ಳು ಮಾಹಿತಿ ನೀಡಿದ್ದಾರೆಂದು ಪಿ. ಬಿ. ತಿಮ್ಮಯ್ಯ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದು ಚುನಾವಣೆ ನೀತಿ ಸಂಹಿತೆ ಅನ್ವಯ ಗಂಭೀರ ಅಪರಾಧವಾಗಿದ್ದು, ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ತಾನು ಚುನಾವಣಾ ಆಯೋಗ ಸೇರಿದಂತೆ ಇದಕ್ಕೆ ಸಂಬಂಧಿಸಿದ ಇಲಾಖೆಗಳಿಗೆ‌ ದೂರು‌ ನೀಡಿರುವುದಾಗಿ ಪಿ.ಬಿ.ತಿಮ್ಮಯ್ಯ ಅವರು ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲೂ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!