Monday, March 27, 2023

Latest Posts

ಭ್ರಷ್ಟಾಚಾರ ಆರೋಪದ ಮೇಲೆ ಮಲೇಷ್ಯಾದ ಮಾಜಿ ಪ್ರಧಾನಿ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭ್ರಷ್ಟಾಚಾರದ ಆರೋಪದ ಮೇಲೆ ಮಲೇಷ್ಯಾದ ಮಾಜಿ ಪ್ರಧಾನಿ ಮುಹಿದ್ದೀನ್ ಯಾಸಿನ್ ಅವರನ್ನು ಬಂಧಿಸಲಾಗಿದೆ. ಯಾಸಿನ್ ಮಾರ್ಚ್ 2020 ರಿಂದ ಆಗಸ್ಟ್ 2021 ರವರೆಗೆ ಮಲೇಷ್ಯಾ ಪ್ರಧಾನಿಯಾಗಿ ಕೆಲಸ ಮಾಡಿದ್ದಾರೆ. ಅನ್ವರ್ ಇಬ್ರಾಹಿಂ ವಿರುದ್ಧ ಚುನಾವಣೆಯಲ್ಲಿ ಸೋತ ಮೂರು ತಿಂಗಳ ನಂತರ ಯಾಸಿನ್ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಲಾಗಿತ್ತು. ಆದರೆ ಇವು ಕೇವಲ ರಾಜಕೀಯ ಆರೋಪಗಳಾಗಿದ್ದು, ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಯಾಸಿನ್ ಹೇಳಿದ್ದಾರೆ.

ಕೋವಿಡ್ ಸಮಯದಲ್ಲಿ ಗುತ್ತಿಗೆಗಳ ಬದಲಾಗಿ ಕಟ್ಟಡ ಗುತ್ತಿಗೆದಾರರು ತಮ್ಮ ಬರ್ಸಾಟು ಪಕ್ಷದ ಖಾತೆಗಳಿಗೆ ಹಣವನ್ನು ಠೇವಣಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಯಾಸಿನ್ ಗುರುವಾರ (ಮಾರ್ಚ್ 9, 2023) MACC ಯಲ್ಲಿ ವಿಚಾರಣೆಗೆ ಸ್ವಯಂಪ್ರೇರಿತವಾಗಿ ಹಾಜರಾಗಿದ್ದರು. ಯಾಸಿನ್‌ನನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎಂಸಿಸಿ ಮುಖ್ಯಸ್ಥ ಅಜಂಬಾಕಿ ತಿಳಿಸಿದ್ದರು. ಆದರೆ ನ್ಯಾಯಾಲಯ ಗುರುವಾರ ಯಾಸಿನ್‌ಗೆ ಜಾಮೀನು ನೀಡಿದೆ. ಜಾಮೀನಿನ ಮೇಲೆ ಹೊರಬಂದ ಯಾಸಿನ್ ಸ್ಥಳೀಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇವು ಕೇವಲ ರಾಜಕೀಯ ಆರೋಪಗಳಾಗಿದ್ದು, ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಹೇಳಿದ್ದಾರೆ.

ಯಾಸಿನ್ ಮಲೇಷ್ಯಾದಲ್ಲಿ ಪದಚ್ಯುತಗೊಂಡ ನಂತರ ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಂಧನಕ್ಕೊಳಗಾದ ಎರಡನೇ ಅಗ್ರ ನಾಯಕರಾಗಿದ್ದಾರೆ. ವಿವಿಧ ಭ್ರಷ್ಟಾಚಾರ ಆರೋಪಗಳನ್ನು ಎದುರಿಸಿದ ಮತ್ತೊಬ್ಬ ಮಾಜಿ ಪ್ರಧಾನಿ ನಜೀಬ್ ರಜಾಕ್ 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತರು. ಹಲವು ಬಾರಿ ನ್ಯಾಯಾಲಯಕ್ಕೆ ಹಾಜರಾದ ರಜಾಕ್ 12 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಮುಹಿದ್ದೀನ್ ಯಾಸಿನ್ ತನ್ನ 17 ತಿಂಗಳ ಆಡಳಿತದಲ್ಲಿ ವಿವಿಧ ಸರ್ಕಾರಿ ಯೋಜನೆಗಳಲ್ಲಿ ಅಧಿಕಾರ ದುರುಪಯೋಗ ಮತ್ತು ಹವಾಲಾ ಮುಂತಾದ ಅಪರಾಧಗಳನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!