ಹೊಸದಿಗಂತ ವರದಿ, ಹಾಸನ:
ಇಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಮನೆ ದೇವರು ಹಾಸನ ಜಿಲ್ಲೆಯ ಯಲಿಯೂರು ಗ್ರಾಮದಲ್ಲಿರುವ ದೇವಿರಮ್ಮ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ದೇವಿರಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ,ಪ್ರಾರ್ಥಿಸಿದರು.
ನಂತರ ದೇವೇಗೌಡರ ಹುಟ್ಟೂರು ಹರದನಹಳ್ಳಿಯಲ್ಲಿರುವ ಶ್ರೀ ದೇವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.ಹಾಗೆಯೇ ಜಿಲ್ಲೆಯ ಹಳೇಕೋಟೆ ಗ್ರಾಮ ಶ್ರೀ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು,ಚುನಾವಣೆ ಬಳಿಕ ಕಳೆದ ವರ್ಷ ಯಲಿಯೂರಮ್ಮನ ದೇವಾಲಯಕ್ಕೆ ಭೇಟಿ ನೀಡಿದ್ದೆ.ಇಂದು ದೇವೇಗೌಡರು ಮತ್ತು ರೇವಣ್ಣ ಸಾಹೇಬ್ರು ಕಟ್ಟಿಸಿರೋ ದೇವೇಶ್ವರ ದೇವಾಲಯಕ್ಕೆ ಬಂದು ದರುಶನ ಮಾಡಿದ್ದೇನೆ.ನನ್ನ ಪತ್ನಿ ಮನೆದೇವರ ದರುಶನ ಮಾಡಬೇಕೆಂದುಕೊಂಡಿದ್ದರು. ಅದೇ ರೀತಿ ಇಂದು ಕುಟುಂಬ ಸಮೇತ ಬಂದು ದರುಶನ ಮಾಡಿದ್ದೇವೆ ಎಂದು ತಿಳಿಸಿದರು.
ನನ್ನ ಉಪ ಚುನಾವಣೆ ಅನಿರೀಕ್ಷಿತ ಬೆಳವಣಿಗೆ.ಎಲ್ಲವೂ ಕೂಡ ಜಗಜ್ಜಾಹಿರ, ತೆರೆದ ಪುಸ್ತಕ ಎರಡು ಪಕ್ಷದ ವರಿಷ್ಠರ ಆದೇಶದಂತೆ ಈ ಉಪ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೇನೆ.ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಂದು ಸ್ವಯಂ ಪ್ರೇರಿತರಾಗಿ ನಿಖಿಲ್ ಕುಮಾರಸ್ವಾಮಿ ಗೆಲ್ಲಬೇಕು ಎಂದು ಹಗಲಿರುಳು ಶ್ರಮಿಸಿದ್ದಾರೆ. ಚುನಾವಣೆ ಸಂದರ್ಭ ಅವರೆಲ್ಲರನ್ನೂ ಕಾಣಲು ಆಗಿಲ್ಲ, ಅವರೆಲ್ಲರನ್ನೂ ಎಲ್ಲಾ ಕಾಲದಲ್ಲೂ ಸ್ಮರಿಸಿಕೊಳ್ಳುತ್ತೇನೆ ಎಂದರು.
ಗೆಲ್ಲುತ್ತೇನೆಂದು ಆತ್ಮ ವಿಶ್ವಾಸ
ರೈತ ನಾಯಕ ಬಿ.ಎಸ್ ಯಡಿಯೂರಪ್ಪನವರೇ ಕರೆದು ನನ್ನ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡಿದ್ರು, ಎಲ್ಲಾ ನಾಯಕರೂ ಈ ಉಪ ಚುನಾವಣೆ ಬಗ್ಗೆ ತೀರ್ಮಾನ ತೆಗೆದುಕೊಂಡರು. ಎಲ್ಲಾ ಗ್ರಾಮದ ಅಣ್ಣ, ತಮ್ಮಂದಿರೂ, ತಾಯಂದಿರೂ ನಿಖಿಲ್ ಗೆಲುವಿಗೆ ಹರಸಿದ್ದಾರೆ. ಮನೆದೇವರ ಆವರಣದಲ್ಲಿ ಕುಳಿತು ಹೇಳುತ್ತಿದ್ದೇನೆ ಈ ಉಪ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ನ
ಯುವ ಸಮುದಾಯಕ್ಕೆ ನನ್ನದೇ ಆದ ಕೊಡುಗೆ
ಚನ್ನಪಟ್ಟಣದ ಕ್ಷೇತ್ರದ ಅಭಿವೃದ್ಧಿಗೆ ಕುಮಾರಣ್ಣ ಅವರು ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ನಾನೂ ಕೂಡ ಕ್ಷೇತ್ರದ ಯುವ ಸಮುದಾಯಕ್ಕೆ ನನ್ನದೇ ಆದ ಕೊಡುಗೆ ನೀಡುತ್ತೇನೆ. ಯುವಕರಪರವಾಗಿ ಕೆಲಸ ಮಾಡುತ್ತೇನೆ ಕುಮಾರಸ್ವಾಮಿ ಅವರು ಕೇಂದ್ರ ಕೈಗಾರಿಕಾ ಮಂತ್ರಿಗಳಾಗಿದ್ದಾರೆ.ಅವರ ಜೊತೆಗೂಡಿ ಕೈಗಾರಿಕೆಗಳನ್ನ ತಂದು ಮಹಿಳೆಯರಿಗೆ. ಯುವ ಸಮುದಾಯಕ್ಕೆ ಕೆಲಸ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.